Kodagu

ಮಡಿಕೇರಿ: ₹25 ಸಾವಿರ ಲಂಚಕ್ಕೆ ಕೈ ಚಾಚಿದ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ ಮೃತ ಪೊಲೀಸ್ ಪೇದೆಯ ವಿಮಾ ಹಣ ಬಿಡುಗಡೆಗೆ ಲಂಚ ಬೇಡಿಕೆ

admincoorgdaily

 ಮಡಿಕೇರಿ: ₹25 ಸಾವಿರ ಲಂಚಕ್ಕೆ ಕೈ ಚಾಚಿದ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ  ಮೃತ ಪೊಲೀಸ್ ಪೇದೆಯ ವಿಮಾ ಹಣ ಬಿಡುಗಡೆಗೆ ಲಂಚ ಬೇಡಿಕೆ
ಮಡಿಕೇರಿ: 25 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ವಿಮಾ ಅಧಿಕಾರಿ ಹೇಮಕುಮಾರ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಡಿಕೇರಿಯ ಮಹದೇವಪೇಟೆಯಲ್ಲಿರುವ ಕೆಜಿಐಡಿ ಕಚೇರಿಯಲ್ಲಿ ರೋಹಿಣಿ ಎಂಬುವವರಿಂದ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮೃತ ಪೊಲೀಸ್ ಪೇದೆಯೊಬ್ಬರ ವಿಮಾ ಹಣ ಬಿಡುಗಡೆಗಾಗಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

ಲೋಕಾಯುಕ್ತ ಡಿಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೇಮಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.