ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮಗೆ ಮಡಿಕೇರಿ ಶಾಸಕ ಮಂತರ್ ಗೌಡ ಅಭಿನಂದನೆ
admincoorgdaily

ಮಡಿಕೇರಿ;ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಕೊಡಗಿನ ಹೆಮ್ಮೆಯ ಕ್ರೀಡಾ ತಾರೆ ಎಂ.ಆರ್.ಪೂವಮ್ಮ ಅವರನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ಮಂಗಳೂರಿಗೆ ತೆರಳಿ ಅಭಿನಂದಿಸಿದರು.
ಜಪಾನ್ ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 4x400 ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಪೂವಮ್ಮ ಅವರ ಸಾಧನೆಗೆ ಶಾಸಕರು ಶುಭ ಕೋರಿದರು.
ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲು ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ಶಾಸಕ ಮಂಥರ್ ಭರವಸೆ ನೀಡಿದರು.
ಕೊಡಗಿನಿಂದ ಆಗಮಿಸಿ ಅಭಿನಂದಿಸಿದ ಶಾಸಕರಿಗೆ ಪೂವಮ್ಮ ಅವರ ಪೋಷಕರಾದ ಮಾಚ್ಚೆಟೀರ ರಾಜು ಮತ್ತು ಜಾಜಿ ದಂಪತಿ ಧನ್ಯವಾದ ಸಲ್ಲಿಸಿದರು.