Kodagu

ಮಡಿಕೇರಿ;ಪ್ರವಾಸಿಗನ ದರ್ಪಕ್ಕೆ ಬ್ರೇಕ್ - ಪೊಲೀಸರ ಜೊತೆ ಅನುಚಿತ ವರ್ತನೆ, ₹10,000 ದಂಡ!

admincoorgdaily

ಮಡಿಕೇರಿ;ಪ್ರವಾಸಿಗನ ದರ್ಪಕ್ಕೆ ಬ್ರೇಕ್ - ಪೊಲೀಸರ ಜೊತೆ ಅನುಚಿತ ವರ್ತನೆ, ₹10,000 ದಂಡ!
ಮಡಿಕೇರಿ; ಪ್ರವಾಸಕ್ಕಾಗಿ ಮಡಿಕೇರಿಗೆ ಆಗಮಿಸಿದ್ದ ಪ್ರವಾಸಿಗರು ಬಾಡಿಗೆ ಬೈಕ್ ಪಡೆದು ಏಕಮುಖ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ್ದಲ್ಲದೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಬದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣದಲ್ಲಿ ₹10,000 ದಂಡ ವಿಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿಯಮಗಳನ್ನು ಪಾಲಿಸಿ, ಪೊಲೀಸ್ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ವರ್ತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.