Kodagu

ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ದುಡಿಯುವ ಬಂಡವಾಳ 59.30 ಕೋಟಿಗೆ ಏರಿಕೆ: ಅಧ್ಯಕ್ಷ ಬಿ.ಕೆ.ಜಗದೀಶ್

admincoorgdaily

ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ದುಡಿಯುವ ಬಂಡವಾಳ 59.30 ಕೋಟಿಗೆ ಏರಿಕೆ: ಅಧ್ಯಕ್ಷ ಬಿ.ಕೆ.ಜಗದೀಶ್
ಮಡಿಕೇರಿ, ಸೆ.15: ಸಹಕಾರ ಕ್ಷೇತ್ರದಲ್ಲಿ ಸ್ಥಿರ ಬೆಳವಣಿಗೆ ಕಾಯ್ದುಕೊಂಡಿರುವ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್, ದುಡಿಯುವ ಬಂಡವಾಳವನ್ನು 59.30 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದೆ. ಕಳೆದ ಸಾಲಿಗಿಂತ 4.89 ಕೋಟಿ ರೂ. ಏರಿಕೆಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಬಿ.ಕೆ.ಜಗದೀಶ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 53.86 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 8.23 ಕೋಟಿ ರೂ. ಸಾಲ ನೀಡಿದೆ. 2,481 ಸದಸ್ಯ ಬಲ ಹೊಂದಿದೆ. 18.97 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ ಎಂದರು.

ಹಿರಿಯ ನಾಗರಿಕರಿಗೆ ಶೇ.0.50 ಹೆಚ್ಚುವರಿ ಬಡ್ಡಿ, ಆಭರಣ, ವಾಹನ, ಮನೆ ಖರೀದಿ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸೆ.19ರಂದು ಕೊಡವ ಸಮಾಜದಲ್ಲಿ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಬಿ.ವಿ.ರೋಷನ್, ನಿರ್ದೇಶಕರಾದ ಬಾಲಕೃಷ್ಣ, ಸತೀಶ್ ಪೈ, ನಾಗೇಶ್, ಸತೀಶ್ ಇದ್ದರು.