Kodagu

ಮಡಿಕೇರಿ ಟ್ರಾಫಿಕ್ ಠಾಣೆ ಎದುರೇ ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡಿಂಗ್: ಯುವಕರಿಗೆ 2 ಸಾವಿರ ದಂಡ

admincoorgdaily

ಮಡಿಕೇರಿ  ಟ್ರಾಫಿಕ್ ಠಾಣೆ ಎದುರೇ ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡಿಂಗ್: ಯುವಕರಿಗೆ 2 ಸಾವಿರ ದಂಡ
ಮಡಿಕೇರಿ, ಸೆ.6: ನಗರದ ಮಡಿಕೇರಿ ಸಂಚಾರಿ ಠಾಣೆಯ ಎದುರೇ ಮೂವರು ಯುವಕರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಡಿಯೋ ಆಧರಿಸಿ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ವಾಹನ ಮಾಲೀಕನನ್ನು ಪತ್ತೆ ಹಚ್ಚಿ ರೂ. 2000 ದಂಡ ವಿಧಿಸಿದ್ದಾರೆ.

ಕೆಎಲ್-11-2019002/524 ನೋಂದಣಿ ಸಂಖ್ಯೆಯ ಬೈಕ್‌ನಲ್ಲಿ ಮೂವರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದರು. ಈ ಸಂಬಂಧ
- ಹೆಲ್ಮೆಟ್ ರಹಿತ ಚಾಲನೆಗೆ ರೂ. 500
- ಅಪಾಯಕಾರಿ ಚಾಲನೆ ಮತ್ತು ಟ್ರಿಪಲ್ ರೈಡಿಂಗ್‌ಗೆ ರೂ. 1000 ಸೇರಿ ಒಟ್ಟು ರೂ. 2000 ದಂಡ ವಿಧಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಹೆಲ್ಮೆಟ್ ಜಾಗೃತಿ ಮತ್ತು ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಡಿಕೇರಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.