Kodagu

ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹರದೂರಿನಲ್ಲಿ ಗಾಂಧಿ ಜಯಂತಿ ಆಚರಣೆ

admincoorgdaily

ಮಹಾತ್ಮ ಗಾಂಧಿ ಮೆಮೋರಿಯಲ್  ಟ್ರಸ್ಟ್ ವತಿಯಿಂದ  ಹರದೂರಿನಲ್ಲಿ ಗಾಂಧಿ ಜಯಂತಿ ಆಚರಣೆ
ಮಡಿಕೇರಿ: ಇಂದಿನ ಸಮಾಜಕ್ಕೆ ಮಹಾತ್ಮಾ ಗಾಂಧೀಜಿಯವರ ಆದರ್ಶ ತತ್ವಗಳು ತುಂಬಾ ಅಗತ್ಯವಿದೆ. ಇಂದಿನ ಯುವ ಪೀಳಿಗೆಯ ಬದುಕಿನ ಹಾದಿಯನ್ನು ಗಮನಿಸಿದರೆ ಗಾಂಧೀಜಿಯವರ ತತ್ವವನ್ನು ಮೈಗೂಢಿಸಿಕೊಂಡರೆ ಮಾತ್ರ ಮುಂದಿನ ಉಜ್ವಲ ಭಾರತವನ್ನ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಗಾಂಧೀಜಿಯವರ ಬದುಕಿನ ಬಗೆಗಿನ ಅರಿವು ಮೂಡಿಸುವತ್ತ ಎಲ್ಲಾ ವಿದ್ಯಾಸಂಸ್ಥೆಗಳು ಮತ್ತು ಸರ್ಕಾರ ಕಾಯೋನ್ಮುಖವಾಗುವ ಅಗತ್ಯತೆ ಇದೆ ಎಂದು ಮಹಾತ್ಮಾ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಕಾರ್ಯದರ್ಶಿ ಡೆನಿಸ್ ಡಿ'ಸೋಜ ಅಭಿಪ್ರಾಯ ವ್ಯಕ್ತ ಪಡಿಸಿದರು. 

ಎಸ್.ಎಂ.ಜಿ.ಎಂ. ಟ್ರಸ್ಟ್ ನ ವತಿಯಿಂದ ಹರದೂರಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
ಕಾರ್ಯಕ್ರಮದ ಸ್ವಾಗತವನ್ನು ಟ್ರಸ್ಟ್ನ ಸಂಚಾಲಕರಾದ  ಎಂ. ಇ ಮೊಹಿದ್ದೀನ್ ಮಾಡಿದರು. ಕೊನೆಯಲ್ಲಿ ಟ್ರಸ್ಟಿ ಕರ್ನಲ್ ಬಿ.ಜಿ.ವಿ ಕುಮಾರ್‌ರವರು ವಂದನಾರ್ಪಣೆ ಮಾಡಿದರು.