ಜಗತ್ತು ಕಂಡ ಮಹಾನ್ ಮಾನವತಾವಾದಿ ಮಹಾತ್ಮಾ ಗಾಂಧಿ; ಟಿ.ಪಿ.ರಮೇಶ್ ಅಭಿಮತ
admincoorgdaily

ಮಡಿಕೇರಿ;
ಈ ಜಗತ್ತು ಕಂಡ
ಮಹಾನ್ ಮಾನವತಾವಾದಿ ಹಾಗೂ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ
ಅಧ್ಯಕ್ಷರಾದ ಟಿ.ಪಿ.ರಮೇಶ್ ರವರು ಅಭಿಮತ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಆಯೋಜಿಸಿದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಮೇಶ್ ರವರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಜೀವನದ ಪ್ರಮುಖ ಘಟ್ಟಗಳನ್ನು ವಿವರಿಸಿದರು.
ಮಹಾತ್ಮ ಗಾಂಧಿಯವರು ಬಾಲಕರಾಗಿದ್ದಾಗ ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿ ಪ್ರಭಾವಿತರಾಗಿ ತಮ್ಮ ಜೀವಮಾನ ಪೂರ್ಣ ಅಸತ್ಯವನ್ನು ನುಡಿಯದೇ ಪಾಲನೆ ಮಾಡಿದ್ದು
ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ಬಳಸಿ ಜಗತ್ತನ್ನೇ ಬೆರಗುಗೊಳಿಸಿದ ಗಾಂಧೀಜಿಯವರನ್ನು ನಾವು ಪ್ರತಿನಿತ್ಯ ದೇವರನ್ನು ಸ್ಮರಿಸುವ ರೀತಿಯಲ್ಲಿ ಸ್ಮರಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಗಾಂಧೀಜಿಯವರು
ಕೊಡಗಿಗೆ ಬಂದ ಘಟನೆಗಳನ್ನು ವಿವರಿಸಿದರು.
ಜೈ ಜವಾನ್ ಮತ್ತು ಜೈ ಕಿಸಾನ್ ಎಂದು ಘೋಷಣೆಗಳನ್ನು ನೀಡಿ ದೇಶದ ಬಲವರ್ಧನೆಗೆ ಸೈನಿಕ ಮತ್ತು ರೈತ ಅನಿವಾರ್ಯ ಎಂದು ಬಲವಾಗಿ ಪ್ರತಿಪಾದಿಸಿದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ತಮ್ಮ ನೈತಿಕತೆಯ ಮೂಲಕ ಇಂದಿ ನ ಪೀಳಿಗೆಯ ಪ್ರಧಾನ ಮಂತ್ರಿ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ರಾಜಕಾರಿಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ದೇಶದ ಪ್ರಧಾನ ಮಂತ್ರಿಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸ ಮಾಡಿ ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಶಾಸ್ತ್ರಿ ರವರು ಜಗತ್ತಿಗೆ ತೋರಿದ್ದಾರೆ ಎಂದು
ಬಣ್ಣಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ದೇಶಕ್ಕೆ ನೀಡಿದ ಕೊಡಗುಗೆಗಳು ಅವರ ನೆನಪನ್ನು ಸದಾ ಕಾಲ ಜೀವಂತವಾಗಿಸಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ಯವರು ಸಮಾಜದ ಪರಿವರ್ತಕರಾಗಿದ್ದರು ಎಂದು ಸ್ಮರಿಸಿದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ರವರು ಮಾತನಾಡಿ
ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಚಿತ್ರಪಟಕ್ಕೆ
ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮಹಾನ್ ಚೇತನಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗೌರವ ಸಮರ್ಪಣೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್,ಡಿ.ಸಿ.ಸಿ ಸದಸ್ಯರಾದ ಅಬ್ದುಲ್ ರಜಾಕ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕವನ್ ಕೊತ್ತೋಳಿ,ಪ್ರಚಾರ ಸಮಿತಿ ಬ್ಲಾಕ್ ಅಧ್ಯಕ್ಷರಾದ ವಿ.ಜಿ.ಮೋಹನ್,
ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರಾದ ಕೆ.ಜಿ.ಪೀಟರ್,ಮಹಿಳಾ ನಗರಾಧ್ಯಕ್ಷರಾದ ಶಶಿ, ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ನಗರ ಯುವ ಘಟಕದ ಅಧ್ಯಕ್ಷರಾದ ಅರ್ಜುನ್ ಪ್ರಮುಖರಾದ ಜಿ.ಸಿ.ಜಗದೀಶ್,ಫ್ಯಾನ್ಸಿ ಪಾರ್ವತಿ,ರಿಯಾಸ್ಸುದ್ದೀನ್,ಮುನೀರ್ ಮಾಚರ್,ವಸಂತ್ ಭಟ್,ಬೊಳ್ಳಿಯಂಡ ಗಣೇಶ್,
ಮೀನಾಜ್ ಪ್ರವೀಣ್ ,ವೀಣಾಕ್ಷಿ ,ಲೀಲಾ ಶೇಷಮ್ಮ, ಶಾಹಿದ್ ಬಾದ್'ಶಾ, ಮಮ್ತಾಜ್ ಬೇಗಂ,ಶ್ರೀಮತಿ ಬಂಗೇರ,ಹರಿಣಾಕ್ಷಿ,ವಿಮಲ,ಪ್ರೇಮಾ ನಿಂಗಪ್ಪ,ತಾಜ್ಜುನ್ನೀಸಾ,ಧನಲಕ್ಷ್ಮಿಪೊನ್ನಕ್ಕ,,ಹಬೀಬ್,ಸುನಂದ,ಆದಂ,
ಮಹೇಶ್,ಸಾಹುಲ್,ಪ್ರತಾಪ್,ಕಿಶನ್,
ಅಭಿಲಾಸ್,ರಾಣಿ,ಉಷಾ,ರಾಜು,ವಜೀರ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.