ನಾಡಿನ ಸಮೃದ್ಧಿಗಾಗಿ ತಲಕಾವೇರಿಗೆ ಮಂಡ್ಯ ಕರವೇ; ಕೊಡಗು ಕರವೇ ಯಿಂದ ಸ್ವಾಗತ
admincoorgdaily

ಸೋಮವಾರಪೇಟೆ:-ಕರ್ನಾಟಕದ ಜೀವನಾಡಿ, ಕೋಟ್ಯಂತರ ಜನರ ಜೀವಜಲ ಹಾಗೂ ನಾಡಿನ ಸಮೃದ್ಧಿಯ ಸಂಕೇತವಾದ ಕಾವೇರಿ ತಾಯಿಯ ದರ್ಶನಕ್ಕಾಗಿ ಮಂಡ್ಯ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಕುಶಾಲನಗರದ ಕೊಪ್ಪ ಗೇಟ್ನಲ್ಲಿರುವ ಕಾವೇರಿ ಪ್ರತಿಮೆಯ ಬಳಿ ತಂಡವನ್ನು ಜಿಲ್ಲಾಧ್ಯಕ್ಷ ರಾದ ದೀಪಕ್ ಕನ್ನಡಿಗ ರವರ ಮಾರ್ಗದರ್ಶನದಲ್ಲಿ ಯುವ ಘಟಕದ ತಾಲೂಕು ಅಧ್ಯಕ್ಷ ಪುನೀತ್ ರವರ ನೇತೃತ್ವದಲ್ಲಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿ ಗೌರವಿಸಲಾಯಿತು. ನಂತರ ಕಾವೇರಿ ತಾಯಿ ಪ್ರತಿಮೆಗೆ ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದದೊಂದಿಗೆ ಪವಿತ್ರ ತೀರ್ಥಕ್ಷೇತ್ರವಾದ ತಲಕಾವೇರಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಆನಂದ್ ಕನ್ನಡಿಗ ಜಿಲ್ಲಾ ಕಾರ್ಯದರ್ಶಿ ಸಂದೀಪ್ ಪೆಂಗ್ವಿನ್ ತಾಲೂಕು ಅಧ್ಯಕ್ಷ ಆಸಿಫ್ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಇಂಚರ ಗೌಡ ತಾಲೂಕು ಉಪಾಧ್ಯಕ್ಷೆ ನಾಗರತ್ನ ನಗರಾಧ್ಯಕ್ಷ ಯೋಗೇಶ್ ಗೌಡ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್ ಪಾಂಡುರಂಗ ಆವರ್ತಿ ಹರೀಶ್ ಪ್ರಕಾಶ್ ಶಾರದ ಹಾಜರಿದ್ದರು.