Kodagu

ಮಂಜಿನ ನಗರಿ ಛಾಯಾಗ್ರಾಹಕರ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ

admincoorgdaily

ಮಂಜಿನ ನಗರಿ ಛಾಯಾಗ್ರಾಹಕರ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ
ಮಡಿಕೇರಿ, ಸೆ. 10: ಮಂಜಿನ ನಗರಿ ಛಾಯಾಗ್ರಾಹಕರ ಸಂಘದ ಮಾಸಿಕ ಸಭೆಯು ನಡೆದಿದ್ದು, ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶ್ ಮಾಟ್ಕರ್, ಉಪಾಧ್ಯಕ್ಷರಾಗಿ ಕುಂಜಲನ ಪ್ರಕಾಶ್, ಕಾರ್ಯದರ್ಶಿಯಾಗಿ ಮಹಮದ್ ಹನೀಫ್, ಸಹ ಕಾರ್ಯದರ್ಶಿಯಾಗಿ ದಿನೇಶ್ ಪಿ.ಕೆ, ಹಾಗೂ ಖಜಾಂಜಿಯಾಗಿ ದಿವಾಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ನೂತನ ಶಿಸ್ತುಬದ್ಧ ಕಾರ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಲಾಯಿತು.

ಇದಲ್ಲದೆ, ತಾಲೂಕು ಸಂಘದ ವತಿಯಿಂದ ಸದ್ಯದಲ್ಲೇ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಕೆಪಿಎ ಆಸರೆ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಸದವರು ಶೀಘ್ರದಲ್ಲೇ ಅರ್ಜಿ ಭರ್ತಿ ಮಾಡಿ ನೀಡುವಂತೆ ಸೂಚಿಸಲಾಯಿತು.

ದರಪಟ್ಟಿಯಲ್ಲಿ ಕೆಲವು ತಿದ್ದುಪಡಿಗಳಿದ್ದು, ಅದನ್ನು ಸರಿಪಡಿಸಿ ನೀಡುವುದಾಗಿ ತಿಳಿಸಲಾಯಿತು. ಕೊನೆಯಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ಗುರುಕಾಣಿಕೆ ಚೀಟಿ ನೀಡಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.