Kodagu

ಮೂರ್ನಾಡುವಿನಲ್ಲಿ ಸೆ. 12ರಂದು ಬೃಹತ್ ಮಿಲಾದ್ ಸಂದೇಶ ಜಾಥಾ

admincoorgdaily

ಮೂರ್ನಾಡುವಿನಲ್ಲಿ ಸೆ. 12ರಂದು ಬೃಹತ್ ಮಿಲಾದ್ ಸಂದೇಶ ಜಾಥಾ
ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು :ಮೊಹಮ್ಮದ್ ಪೈಗಂಬರ್‌ (ಸಅ) ರವರ 1501ನೇ ಜನ್ಮ ದಿನಾಚರಣೆಯ ಪ್ರಯುಕ್ತ ಎಸ್ ವೈ ಎಸ್ ಮಡಿಕೇರಿ ಝೋನ್ ಹಾಗೂ ಎಸ್ ಜೆ ಎಂ ಮೂರ್ನಾಡು ರೇಂಜ್ ಸಂಯುಕ್ತ ಆಶ್ರಯದಲ್ಲಿ ಸೆ.12 ರಂದು ಬೃಹತ್ ಮೀಲಾದ್ ಸಂದೇಶ ಜಾಥಾ ನಡೆಯಲಿದೆ.

ಮೂರ್ನಾಡುವಿನ ಕಾಲೇಜು 
 ಮೈದಾನದ ರಸ್ತೆಯಿಂದ ಆರಂಭಗೊಳ್ಳುವ ಜಾಥಾ ಮೂರ್ನಾಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪನಕೊಳ್ಳಲಿದೆ.
ಜಾಥಾವನ್ನು ಉದ್ದೇಶಿಸಿ ಪ್ರಖ್ಯಾತ ವಾಗ್ಮಿ ನೂರುದ್ದೀನ್ ಝುಹರಿ  ಸಂದೇಶ ಭಾಷಣ ಮಾಡಲಿದ್ದಾರೆ.
ಎಸ್ ವೈ ಎಸ್, ಎಸ್ ಜೆ ಎಂ,ಎಸ್ ಎಸ್ ಎಫ್, ಕೆಎಂಜೆ ಹಾಗೂ ಸಂಘ ಕುಟುಂಬದ ನೇತಾರರು ಕಾರ್ಯಕರ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾಥಾವನ್ನು ಯಶಸ್ವಿಗೊಳಿಸುವಂತೆ ಸ್ವಾಗತ ಸಮಿತಿಯ ಕನ್ವಿನರ್ ಸಾಬೀತ್ ಅಹ್ಸನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.