Kodagu

ಕಾರ್ಮಿಕ ಇಲಾಖೆಯಿಂದ ಸಂಘಟನೆಗಳ ಮುಖಂಡರ ಸಭೆ

admincoorgdaily

ಕಾರ್ಮಿಕ ಇಲಾಖೆಯಿಂದ ಸಂಘಟನೆಗಳ ಮುಖಂಡರ ಸಭೆ
ಮಡಿಕೇರಿ; ಕಾರ್ಮಿಕ ಸಚಿವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪ ಕಾರ್ಯದರ್ಶಿ ಗುರುಪ್ರಸಾದ್ ನೇತೃತ್ವದಲ್ಲಿ ಸಂಘಟನೆಯ ಮುಖಂಡರ ಕುಂದು ಕೊರತೆಗಳ ಸಭೆ ನಡೆಯಿತು.

ತಾಂತ್ರಿಕ ಕಾರಣಗಳಿಂದ  ಕಾರ್ಮಿಕ ಕಾರ್ಡ್ ನವಿಕರಣ ಹೊಂದದೆ ನೊಂದಣಿ ರದ್ದಾಗಿರುವುದನ್ನು ಮತೊಮ್ಮೆ ನವಿಕರಿಸಲು ಅನುವು ಮಾಡಿಕೊಡಬೇಕು,ಪಿಂಚಣಿದಾರರ ಅರ್ಜಿಯನ್ನು ವಯೋಮಿತಿ ತಲುಪಿ 6ತಿಂಗಳ ಕಾಲಮಿತಿ ರದ್ದುಪಡಿಸಿ ಆರ್ಜಿ ಹಾಕಿ ಸೌಲಭ್ಯ 
ಲಭಿಸದೇ ಇರುವುದು,  ಕಲ್ಯಾಣ ಮಂಡಳಿಯಲ್ಲಿ ತಾಲೂಕು ಮಟ್ಟದ ಖಾಸಾಗಿ ಆಸ್ಪತ್ರೆಗಳ ನೊಂದಣಿ, ಕಾರ್ಮಿಕ ನಿರೀಕ್ಷಕರಿಗೆ ವಾಹನ ವ್ಯವಸ್ಥೆಯ ಕಲ್ಪಸುವ ಬಗೆ ಕಾಫಿನಾಡು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ, ಎ, ಕೃಷ್ಣ ಅಧಿಕಾರಿಯವರಿಗೆ ಮಾಹಿತಿ ನೀಡಿದರು ನೀಡಿದರು.

ವೀರಾಪೇಟೆಯ ಕಾರ್ಮಿಕ ಸಂಘದ ಮುಖಂಡ ವರ್ಗೀಸ್ ಮಾತನಾಡಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಸಹಾಯ ಧನ, ನಿವೇಶನ ರಹಿತರಿಗೆ ಮನೆ ನಿರ್ಮಾಣ ಕ್ಕೆ ಸಹಾಯ ಧನ ನೀಡುವಂತೆ ಒತ್ತಾಯಿಸಿದರು.

ಈ ಮಗೆ ಮಾಹಿತಿ ಸಂಗ್ರಹಿಸಿ ಮಾತನಾಡಿದ ಅಧಿಕಾರಿ ಮಂಡಳಿ ಮೇಲಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಿ  ಕಾರ್ಮಿಕರಿಗೆ ಸೌಲಭ್ಯ ಕೊಡಿಸುವ ಭರವಸೆ ನೀಡಿದರು.

ಸಭೆಯಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ಎಂ. ಎಂ ಯತ್ನಟ್ಟಿ, ಸೋಮವಾರಪೇಟೆ ತಾಲೂಕು ನಿರೀಕ್ಷಕ ಶಶಿಧರ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ, ತಾಲೂಕು ಮಾಹಿತಿ ನಮೂದುಗಾರರು, ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರುಗಳು ಹಾಜರಿದ್ದರು.