ಮುಂದಿನ ವಾರದಿಂದಲ್ಲೇ ಮಾನವ ವನ್ಯಜೀವಿ ಸಂಘರ್ಷದ ಕುರಿತು ಸಭೆ;ಶಾಸಕ ಡಾ. ಮಂತರ್‌ಗೌಡ
admincoorgdaily

ಸುಂಟಿಕೊಪ್ಪ: ಮುಂದಿನ ವಾರದಿಂದಲ್ಲೇ ಮಾನವ ವನ್ಯಜೀವಿ ಸಂಘರ್ಷದ ಕುರಿತು ಸಭೆ ನಡೆಸುವ ಮೂಲಕ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಜನಾಥಯ್ಯ ಸಬಾಂಗಣದಲ್ಲಿ ಮಾನವ ವನ್ಯಜೀವಿ ಸಂಘರ್ಷದ ಕುರಿತು ಪರಿಹಾರರೋಪಯ್ಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಸಾಕಷ್ಟು ಸಭೆಗಳನ್ನು ಮಾಡಿದ್ದರೂ ಕೂಡ ಆನೆ ಮಾತ್ತು ಮಾನವ ಸಾವು ದಾಳಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲ ಸಾಧ್ಯವಾಗಿಲ್ಲಎಂದು ವಿಷಾಧಿಸಿದ ಅವರು ಇತ್ತೀಚಿನ ದಿನಗಳಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 8 ಗ್ರಾಮ ಪಂಚಾಯಿತಿಯಲ್ಲಿ ಯಾರೇ ಕರೆ ಮಾಡಿದರೂ ಆನೆ ಮಾನವ ಸಂಘರ್ಷದ ಕುರಿತು ಇರುವುದಲ್ಲದೆ ಆಸ್ಪತ್ರೆ ಅಥವಾ ಚೆಕ್ ನೀಡುವ ಸಂದರ್ಭ ಎದುರಾಗುತ್ತಿವುದರ ಬಗ್ಗೆ ಮಾರ್ಮಿಕವಾಗಿ ನುಡಿದರು.
ಅರಣ್ಯ ಇಲಾಖೆಯ ವಿವಿಧ ವಲಯಗಳ ನಡುವೆ ಸಂವಾಹನ ಮತ್ತು ಹೊಂದಾಆಣಿಕೆಯ ಕೊರತೆ ಬಗ್ಗೆ ಹೇಳಿದ ಅವರು ಅರಣ್ಯ ಇಲಾಖೆ, ಜನರು ಮತ್ತು ಪ್ರಾಣಿಗಳ ಸಮಸ್ಯೆಯ ಕುರಿತು ಅರಣ್ಯ ಸಚಿವರ ಮಡಿಕೇರಿ ಭೇಟಿಯಲ್ಲಿ ಗಮನಕ್ಕೆ ತರಲಾಗಿದೆ ಈ ಹಿನ್ನಲೆಯಲ್ಲಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಸಮಸ್ಯೆ ಪರಿಹಾರ ಇದೆ ಎಂಬ ಆಶಾಬಾವನೆಯಿಂದ ಕೆಲಸ ಮಾಡಲು ಕರೆ ನೀಡಿದ ಅವರು ಬೇಕಾದ ಅನುದಾನಕ್ಕೆ ಒಂದು ಸಮಗ್ರ ಕ್ರಿಯಾಯೋಜನೆಯನ್ನು ತಮ್ಮಗೆ ಸಲ್ಲಿಸುವಂತೆ ಉಪ ಅರಣ್ಯ ಸರಂಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಪ್ರತಿಯೊಂದು ಪರಿಹಾರಕ್ಕೆ ಅಥವಾ ಅನುದಾನಕ್ಕೆ ಬೆಂಗಳೂರಿನತ್ತ ಮುಖಮಾಡದೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳ ಬಳಿ ಅನುದಾನವನ್ನು ಇಟ್ಟುಕೊಳ್ಳುವಂತೆ ಅವಕಾಶ ಕಲ್ಪಿಸಿ ಎಂದು ತಾವು ಅರಣ್ಯ ಸಚಿವರಿಗೆ ಮನವಿ ಮಾಡಿದಾಗಿ ಅವರು ಮಾಹಿತಿ ನೀಡಿದರು.
ಹಳ್ಳಿಗಳಲ್ಲಿ ಮತ್ತು ಕಾಡಂಚಿನ ಪ್ರದೇಶಗಳಲ್ಲಿ ನೆಲೆಸಿರು ಕೃಷಿಕರು ಮತ್ತು ಕಾರ್ಮಿಕರು ಅದೃಷ್ಟದ ಬಲದಿಂದ ಮತ್ತು ಪೂರ್ವಜನ್ಮದ ಪುಣ್ಯದ ಬಲದಿಂದ ಬದುಕುತ್ತಿದ್ದಾರೆಂದು ಹೇಳಿದ ಮಂತರ್‌ಗೌಡ ಕೆಲವು ಸಂದರ್ಭಗಳಲ್ಲಿ ಅರಣ್ಯ ಇಲಾಖೆಯ ನಡವಳಿಕೆಯಿಂದ ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಉಂಟು ಮಾಡಿದ್ದಾರೆಂದು ಅಸಾಮಾಧಾನ ಹೊರ ಹಾಕಿದರು. ಈ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಅವಲಂಭಿತವಾದ ಪ್ರದೇಶವಾಗಿದ್ದು ಕೃಷಿಕರು ಭತ್ತದ ಬೇಸಾಯವನ್ನು ಕೈಬಿಟ್ಟಿದ್ದಾರೆ. ಕಾಫಿ ತೋಟಗಳು ಪಾಳು ಬಿಳುತ್ತಿವೆ ಈ ಬಗ್ಗೆ ನಾವೆಲ್ಲಾರೂ ಗಮನಹರಿಸಿ ತುರ್ತು ಮತ್ತು ಶಾಶ್ವತ ಪರಿಹಾರರೋಪಯಗಳನ್ನು ಕಂಡುಕೊಳ್ಳಬೇಕಿದೆ ಎಮದು ಅವರು ಹೇಳಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅವರು ಮಾತನಾಡಿ ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಕುಶಾಲನಗರ ಅರಣ್ಯ ವಲಯದಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿದೆ ಹೆಚ್ಚು ಕಡಿಮೆ 3 ದಶಕಗಳ ಹಿಂದಿನಿಂದಲ್ಲೂ ಈ ಸಮಸ್ಯೆ ನಮ್ಮ ನಡುವೆ ಜೀವಂತವಾಗಿದೆ ಎಂದು ಹೇಳಿದ ಅವರು ಆನೆ ಕಂದಕಗಳಿಂದ ಹಿಡಿದು ಇಲ್ಲಿನವರೆಗಿನ ರೈಲ್ವೆ ಬ್ಯಾರಿಕೆಡ್ ಪರಿಹಾರದವರೆಗಿನ ವಿವರವನ್ನು ನೀಡಿದ ಅವರು ಕಳೆದ 3 ವರ್ಷಗಳಿಂದ ಹೆಚ್ಚು ಕಡಿಮೆ 3 ಕೋಟಿಗೂ ಮಿಕ್ಕಿದ ಅನುದಾನವನ್ನು ಅರಣ್ಯ ಇಲಾಖೆಯ ಕುಶಾಲನಗರ ವಲಯಕ್ಕೆ ನೀಡಲಾಗಿದ್ದು ಇದೀಗ ಕುಶಾಲನಗರ ವಲಯಕ್ಕಾಗಿ ರೂ.5 ಕೋಟಿಯ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗ ನೀಲಿನಕಾಶೆ ತಾಯಾರು ಮಾಡಿದ್ದು ಈ ಬಗ್ಗೆ ಶಾಸಕರು ಮುತ್ತುವರ್ಜಿ ವಹಿಸಿ ಅಗತ್ಯ ಇರುವ ಅನುದಾನವನ್ನು ತರುತ್ತಾರೆಂದು ಅವರು ಖಚಿತವಾಗಿ ನುಡಿದರು.
ಮಡಿಕೇರಿ ಉಪ ವಿಭಾಗದ ಉಪರಣ್ಯ ಸಂರಕ್ಷಾಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ ಈಗಾಗಲೇ ಸಮಗ್ರ ಕ್ರಿಯಾಯೋಜನೆಯ ಕುರಿತು ನೀಲಿನಕಾಶೆ ಶೇ.70 ರಷ್ಟು ಮುಗಿದಿದ್ದು, ಮೊದಲ ಹಂತದಲ್ಲಿ ರೂ.5ಕೋಟಿಯ ತುರ್ತು ಅನುದಾನವನ್ನು ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿ ಶಾಸಕರ ಮೂಲಕ ಶೀಘ್ರನುದಾನವನ್ನು ಪಡೆಯಲು ಪ್ರಯತ್ನಿಸಲಾಗುವುದೆಂದು ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಕೇಳಿದ ಬಂದ ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಸಮಜಾಯಿಷಿಕೆ ನೀಡಿದ ಅವರು ಇಲ್ಲಾಖೆಯಲ್ಲಿನ ವಾಹನ ಮತ್ತು ಸಿಬ್ಬಂದಿ ಕೊರತೆ ಅರಣ್ಯದಲ್ಲಿ ಆನೆಗಳಿಗೆ ಮೇವು ಮತ್ತು ನೀರು ಮಾನವ ವನ್ಯಜೀವಿ ಸಂಗರ್ಷಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಗೆ ಒಂದು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯ ವೇದಿಕೆಯಲ್ಲಿ ಸುಂಟಿಕೊಪ್ಪ ಹೋಬಳಿ ರೈತ ಸಂಘದ ಅಧ್ಯಕ್ಷ ನಾಗಚೆಟ್ಟಿರ .ಸಿ.ಪೊನ್ನಪ್ಪ, ಉಪಾಧ್ಯಕ್ಷ ಕುಂಜಿಲನ .ಎಸ್.ಮಂಜುನಾಥ್, ದಾಸಂಡ ರಮೇಶ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿಡಿಸೋಜ, ಎ.ಸಿಎಫ್ ನವೀನ್ ಕುಮಾರ್, ಮಾಜಿ ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಉಪಸ್ಥಿತರು.