Kodagu

ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ: ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್

admincoorgdaily

ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ  ರಾಜ್ಯ  ಸಮ್ಮೇಳನ:  ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್
ಮಡಿಕೇರಿ ಸೆ. 05  - ಕೊಡಗು ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ಮಂಡಿ ಸಮಸ್ಯೆಯ ಪರಿಹಾರಕ್ಕಾಗಿ  ರೋಬೋಟಿಕ್ ಸಜ೯ರಿ ಸೌಲಭ್ಯ ದೊರಕಲಿದೆ. ಇದಕ್ಕಾಗಿ 3 ಕೋಟಿ ರು. ವೆಚ್ಚದ ರೋಬೋಟಿಕ್ ಉಪಕರಣಕ್ಕಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ  ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿದ೯ಶಕ ಡಾ.ಎ.ಜಿ. ಲೋಕೇಶ್ ತಿಳಿಸಿದ್ದಾರೆ.
ನಗರದ  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕನಾ೯ಟಕ   ಆರ್ಥೋಪೆಡಿಕ್ ಅಸೋಸಿಯೇಷನ್'  ಹಾಗೂ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗ'ದ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಮಧ್ಯವಾರ್ಷಿಕ  ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿಯ ಸಮ್ಮೇಳನವು ಮಂಡಿ ಚಿಪ್ಪು ಮತ್ತು ಕೀಲು ಸಮಸ್ಯೆಗಳ ಸಂಪೂರ್ಣ ಅಧ್ಯಯನ  ಎಂಬ ಶೀರ್ಷಿಕೆಯಡಿ ನಡೆಯಲಿದ್ದು, ಮಂಡಿ ಕೀಲು ನುಣುಪು ಸಮಸ್ಯೆಗಳು, ದಿನನಿತ್ಯದ ನಡಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಎದುರಾಗುವ ತೊಂದರೆಗಳು, ಕ್ರೀಡಾಪಟುಗಳ ಮಂಡಿ ಗಾಯಗಳು  ಸುಧಾರಿತ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು   ಕೀಲು ತಪಾಸಣೆ  ಸೇರಿದಂತೆ ನಾನಾ ಜಟಿಲ ಸಮಸ್ಯೆಗಳ ಕುರಿತು ರಾಜ್ಯದ ವಿವಿಧ ಭಾಗಗಳ ತಜ್ಞ ವೈದ್ಯರಿಂದ ಉಪನ್ಯಾಸ, ವಾದ-ಮಂಡನೆ ಹಾಗೂ ಸಂವಾದಗಳು ಎರಡು ದಿನಗಳ ಕಾಲ ನಡೆಯಲಿದೆ ಎಂದು ಡಾ. ಲೋಕೇಶ್ ಮಾಹಿತಿ ನೀಡಿದರು.
2016 ರಲ್ಲಿ ಪ್ರಾರಂಭವಾದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಇದೀಗ 10 ವಷ೯ಗಳನ್ನು ಪೂರೈಸಿದ್ದು, ಶೀಘ್ರಗತಿಯಲ್ಲಿ ಅಭಿವೖದ್ದಿ ಹೊಂದುತ್ತಿದೆ. ಪ್ರಸ್ತುತ 650 ಹಾಸಿಗೆಗಳ ಸೌಲಭ್ಯವಿರುವ ಜಿಲ್ಲಾ ಸಕಾ೯ರಿ ಆಸ್ಪತ್ರೆಯನ್ನು ಈ ವಷಾ೯ಂತ್ಯದೊಳಗಾಗಿ 800 ಹಾಸಿಗೆಗಳ ಸೌಲಭ್ಯಗಳಿಗೆ ಉನ್ನತ ದಜೆ೯ಗೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಡಾ.ಲೋಕೇಶ್, 3 ಕೋಟಿ ರುಪಾಯಿ ವೆಚ್ಚದಲ್ಲಿ ಮಂಡಿನೋವಿನ ಶಸ್ತ್ರಚಿಕಿತ್ಸೆಗಾಗಿ ರೋಬೋಟಿಕ್ ಸಜ೯ರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೊಡಗು ಆರೋಗ್ಯ ಕ್ಷೇತ್ರದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಸಚ್ಚಿದನಾಂದ ರೈ   ಮಾತನಾಡಿ, ಪ್ರತೀ ವಷ೯ವೂ ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಿಂದ 300 ಕ್ಕೂ ಅಧಿಕ ಮೂಳೆ ಮತ್ತು ಕೀಲು ವೈದ್ಯರು ವೈದ್ಯಕೀಯ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಇಂಥವರಿಗೆ ಈ ಕ್ಷೇತ್ರದಲ್ಲಿನ ಆಧುನಿಕ ಸೌಲಭ್ಯಗಳ ಮಾಹಿತಿ ನೀಡಬೇಕಾಗುತ್ತದೆ ಎಂದರು.  ಇದೇ ಮೊದಲ ಬಾರಿಗೆ ಅಸೋಸಿಯೇಷನ್ ವತಿಯಿಂದ ಅಧ೯ವಾಷಿ೯ಕ ಸಮ್ಮೇಳನ ಆಯೋಜಿಸಲಾಗುತ್ತಿದೆ.   ರಾಜ್ಯದ ವಿವಿಧ ಬಾಗಗಳಿಂದ  250  ಕ್ಕೂ ಹೆಚ್ಚು ಕೀಲು  ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರು ಭಾಗವಹಿಸಿದ್ದಾರೆ ಎಂದೂ ಡಾ. ಸಚ್ಚಿದಾನಂದ   ತಿಳಿಸಿದರು.
ಸಮ್ಮೇಳನದ ಆಯೋಜನಾ ಸಮಿತಿ  ಜಂಟಿ ಸಂಚಾಲಕ ಡಾ. ವಿನಯ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕುಮಾರ್ ಬಿ.ಎಸ್‌  , ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.. ವಿಶಾಲ್ ಕುಮಾರ್, ತಜ್ಞ ವೈದ್ಯ ಡಾ.ಸೋಮಶೇಖರ್,   , ಕೆ.ಎಂ.ರೋಹಿಣಿ ಬಸವರಾಜ್, ಡಾ.ಬಿ.ವಿ. ಅಭಿನಂದನ್, ಡಾ. ಎಸ್.ಎಂ.ಧನಂಜಯ್ ಕುಮಾರ್ ಸ್ಮರಣ ಸಂಚಿಕೆಯ ಸಂಪಾದಕ ಡಾ.  ಅವಿನಾಶ್ ಪಾಥ೯ಸಾರಥಿ , ಡಾ.ಮಂಜುನಾಥ್, ಡಾ.ಆತ್ಮಾನಂದ ಹೆಗಡೆ , ಡಾ. ಹರೀಶ್ ಮೂತಿ೯, ಡಾ.ಜಿ.ಭರತ್ ರಾಜ್, ಡಾ. ವಿನಯ್,  ಡಾ.ರಾಕೇಶ್ ಕುಮಾರ್, , ಡಾ.ಬಿ.ಚಿದಾನಂದ  ವೇದಿಕೆಯಲ್ಲಿದ್ದರು.



ವಿದ್ಯಾರತ್ನ ಪ್ರಶಸ್ತಿಯ ಗೌರವ:

ಶಿಕ್ಷಕರ ದಿನಾಚರಣೆ  ಹಿನ್ನಲೆಯಲ್ಲಿ   ಸಮ್ಮೇಳನದಲ್ಲಿ ಕನಾ೯ಟಕದ ಪ್ರಮುಖ ಮೂಳೆ ಮತ್ತು ಕೀಲು ರೋಗ ತಜ್ಞರನ್ನು ವಿದ್ಯಾರತ್ನ ಪ್ರಶಸ್ತಿ ಮೂಲಕ ಗೌರವಿಸಿ ಸನ್ಮಾನಿಸಲಾಯಿತು. ಡಾ.  ಶ್ರೀಧರ ಮೂತಿ೯, ಡಾ. ಬಿ.ಸೀತಾರಾಮ್ ರಾವ್,  ಡಾ. ಸಚಿನ್ ಷಾ ಅವರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.