ನ.13 ರಂದು ಮಿನಿ ಉದ್ಯೋಗ ಮೇಳ
admincoorgdaily

ಮಡಿಕೇರಿ:-ಸೋಮವಾರಪೇಟೆ ತಾಲ್ಲೂಕು, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಸಹಯೋಗದೊಂದಿಗೆ ನವೆಂಬರ್, 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ “ಮಿನಿ ಉದ್ಯೋಗ ಮೇಳ” ನಡೆಯಲಿದೆ.
ಈ ಮಿನಿ ಉದ್ಯೋಗ ಮೇಳದಲ್ಲಿ ಅಟೋಲೈವ್ ಎಂಎನ್ಸಿ ಕಂಪನಿ ಮೈಸೂರು, ರಾಣಿ ಮದ್ರಾಸ್ ಪ್ರೈ.ಲಿ. ಮೈಸೂರು, ಆಕ್ಸರ್ ಸೆಕ್ಯೂರಿಟಿ ಕಂಪನಿ ಬೆಂಗಳೂರು, ಡಾಬರ್ಮ್ಯಾನ್ ಸೆಕ್ಯುರಿಟಿ ಸೆಲ್ಯೂಷನ್ ಏಜೆನ್ಸಿ ಮಂಗಳೂರು, ಜೆಕೆ ಟೈರ್ಸ್ ಮೈಸೂರು, ಶ್ರೀರಾಮ್ ಪೈನಾನ್ಸ್ ಲಿಮಿಟೆಡ್, ಮಡಿಕೇರಿ, ಪಿರಾಮಲ್ ಪೈನಾನ್ಸ್ ಲಿಮಿಟೆಡ್, ಕುಶಾಲನಗರ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಈ ಮಿನಿ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ಮಿನಿ ಉದ್ಯೋಗಮೇಳದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಹುದ್ದೆಗೆ ಎಸ್ಎಸ್ಎಲ್ಸಿ, ಪಿಯುಸಿ., ಐಟಿಐ, ಡಿಪ್ಲೋಮ, ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಮಿನಿ ಉದ್ಯೋಗಮೇಳಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ, ಸಿ.ಬಿ.ಮಂಜುನಾಥ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್ 8296020826 ನ್ನು ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.