ಅಯ್ಯಂಗೇರಿ ಗ್ರಾಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣರಿಂದ ₹20 ಲಕ್ಷ ಅನುದಾನದ 5 ರಸ್ತೆಗಳ ಲೋಕಾರ್ಪಣೆ : ಮಸೀದಿ ರಸ್ತೆಗೆ ₹5 ಲಕ್ಷ ಭೂಮಿಪೂಜೆ
admincoorgdaily

ಮಡಿಕೇರಿ;ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಭಾಗಮಂಡಲ ಹೋಬಳಿಯ ಅಯ್ಯಂಗೇರಿ ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.
ಶಾಸಕರ ಅನುದಾನದ ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 5 ರಸ್ತೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು, ಸ್ಥಳೀಯರಿಗೆ ಶುಭ ಕೋರಿದರು.
ಲೋಕಾರ್ಪಣೆಗೊಂಡ ರಸ್ತೆಗಳು:
1. ಸಣ್ಣಪುಲಿಕೋಟು ಮುಖ್ಯ ರಸ್ತೆಯಿಂದ ಪಟ್ಟಮಾಡ ಮನೆಗೆ ಹೋಗುವ ರಸ್ತೆ
2. ಅಯ್ಯಂಗೇರಿಯ ಜಿದ್ದಾ ಸ್ಟೋರ್ ರಸ್ತೆ
3. ಅಯ್ಯಂಗೇರಿ ಮುಖ್ಯ ರಸ್ತೆಯಿಂದ ಆಡಿಕೋಡ್ ರಸ್ತೆ
4. ಜಿದ್ದಾ ಸ್ಟೋರ್ ರಸ್ತೆಯಿಂದ ಸುಗು ರವರ ಮನೆಗೆ ಹೋಗುವ ರಸ್ತೆ
5. ಅಯ್ಯಂಗೇರಿ ಮುಖ್ಯ ರಸ್ತೆಯಿಂದ ಟವರ್ ರಸ್ತೆ
ಇದೇ ಸಂದರ್ಭದಲ್ಲಿ ಅಯ್ಯಂಗೇರಿ ಭಾಗದ ಹಳೆ ಜುಮ್ಮಾ ಮಸೀದಿ ಅಭಿವೃದ್ಧಿ ಕಾಮಗಾರಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿದ್ದು, ಕಾಮಗಾರಿಯ ಪ್ರಗತಿಯನ್ನು ಶಾಸಕರು ಪರಿಶೀಲಿಸಿದರು. ಬಳಿಕ ಮಸೀದಿಗೆ ತೆರಳುವ ರಸ್ತೆಗೆ ₹5 ಲಕ್ಷ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿದರು.
ಸ್ಥಳೀಯರು ನೀಡಿದ ಆತ್ಮೀಯ ಸನ್ಮಾನವನ್ನು ಶಾಸಕರು ಸ್ವೀಕರಿಸಿದರು. ಎಲ್ಲಾ ರಸ್ತೆ ಕಾಮಗಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಶಾಸಕರು, ರಸ್ತೆಯ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು, ಸ್ಥಳೀಯರು ಉತ್ತಮ ಕಾರ್ಯಗಳಿಗೆ ಕೈಜೋಡಿಸುವುದರಿಂದ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ಬಗರ್ ಹುಕುಂ ಅಧ್ಯಕ್ಷ ನೆರವಂಡ ಉಮೇಶ್, ವಲಯ ಅಧ್ಯಕ್ಷ ಅಬ್ದುಲ್ ರೆಹಮಾನ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಗೌರೀಶ್ ರೈ, ಮಾಜಿ ವಲಯ ಅಧ್ಯಕ್ಷ ಮೊಹಮ್ಮದ್, ಕೊಡಗು ಜಿಲ್ಲಾ NSUI ಜಿಲ್ಲಾಧ್ಯಕ್ಷ ಹಾಗೂ ಅಯ್ಯಂಗೇರಿ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ರಶೀದ್, ಪಕ್ಷದ ಮುಖಂಡರಾದ ದಯಾ ಚಿನ್ನಪ್ಪ, ಮಿಥುನ್ ಮಾಚಯ್ಯ, ನಂದ ದೇವಯ್ಯ, ಪ್ರಕಾಶ್ ಕುದುಪಾಜೆ, ವೆಂಕಟೇಶ್ ಕೋಳಿಬೈಲು, ಮೋಟಯ್ಯ, ರಮೇಶ್, ದೇವಾಂಗೋಡಿ ಹರ್ಷ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.