Kodagu

ಎಡಪಾಲದಲ್ಲಿ 35 ಲಕ್ಷ ವೆಚ್ಚದ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ

admincoorgdaily

ಎಡಪಾಲದಲ್ಲಿ 35 ಲಕ್ಷ ವೆಚ್ಚದ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
ಮಡಿಕೇರಿ ;ತಾಲೂಕಿನ ಎಡಪಾಲ ಗ್ರಾಮದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕುರಿಕಡೆ ಕುಟುಂಬದ ಮನೆಗೆ ಹೋಗುವ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ವಲಯ ಅಧ್ಯಕ್ಷ ಕೊಡೀರ ವಿನೋದ್ ನಾಣಯ್ಯ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪಕ್ಷದ ಮುಖಂಡರಾದ ಪ್ರಕಾಶ್, ಎಡಪಾಲ ಶಾಫಿ, ಕುಂಡಚ್ಚೀರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಉದಯ್ ಮಾದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೋಡಿ, ಮಹಮ್ಮದ್ ಉಸ್ತಾದ್, ಇಬ್ರಾಹಿಂ, ರಶೀದ್, ಮಜೀದ್, ಖಾಲಿದ್ ಸೇರಿದಂತೆ ಸ್ಥಳೀಯ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.