ಕೈಕೇರಿ ಜಮ್ಮಡ ಐನ್ ಮನೆಗೆ 10 ಲಕ್ಷದ ನೂತನ ಕಾಂಕ್ರೀಟ್ ರಸ್ತೆ: ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟನೆ
admincoorgdaily

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಕೈಕೇರಿಯಲ್ಲಿರುವ ಜಮ್ಮಡ ಐನ್ ಮನೆಗೆ ತೆರಳುವ ರೂ.10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಂಡ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಇಂದು ಉದ್ಘಾಟಿಸಿದರು.
ನೂತನ ರಸ್ತೆ ಉದ್ಘಾಟಿಸಿ ಮಾತನಾಡಿದ ಶಾಸಕರು, ಕೊಡಗಿನಲ್ಲಿ ಐನ್ ಮನೆ ಸಂಸ್ಕೃತಿ ನಮ್ಮೆಲ್ಲರ ಭಾವನೆಗಳೊಂದಿಗೆ ಬೆಸೆದುಕೊಂಡಿದೆ. ಪುರಾತನವಾದ ಈ ಸಂಸ್ಕೃತಿಯನ್ನು ಉಳಿಸಲು ಪ್ರತಿಯೊಬ್ಬರೂ ಐನ್ ಮನೆಗೆ ಬಂದು ನಮ್ಮ ಪದ್ಧತಿ, ಸಂಪ್ರದಾಯಗಳನ್ನು ಆಚರಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕು. ಐನ್ ಮನೆಗೆ ತೆರಳಲು ಅನುಕೂಲವಾಗಲೆಂದು ಈ ಅನುದಾನ ನೀಡಿದ್ದು, ಇದರ ಸದ್ಬಳಕೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಮ್ಮಡ ಕುಟುಂಬದ ಮುಖ್ಯಸ್ಥ ಶಂಭು, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯಾಧ್ಯಕ್ಷ ಕೊಕ್ಕಂಗಡ ರೋಷನ್, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೊಮ್ಮಣ್ಣ, ಮುಖಂಡರಾದ ವಿ.ಟಿ. ವಾಸು, ತೆರಸಾ ವಿಕ್ಟರ್, ಬೇಬಿ, ಶ್ರೇಯಸ್, ಜಮ್ಮಡ ಗಣೇಶ್, ಬಿ.ಎ. ಸೋಮಣ್ಣ, ನಾಣಯ್ಯ, ಸುರೇಶ್, ಕುಂಡಚ್ಚಿರ ಮಂಜು ದೇವಯ್ಯ, ಹಂಝು, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮುತಣ್ಣ, ಉದಯ ಮಾದಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.