ಪೊನ್ನಂಪೇಟೆ ತಾಲೂಕಿನಲ್ಲಿ ಬಿರುವಾಸ್ ಪೂಜಾರಿ ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಪಂದ್ಯಾಟಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ
admincoorgdaily

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಿರುವಾಸ್ ಪೂಜಾರಿ ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಿ ಆಟಗಾರರಿಗೆ ಶುಭ ಕೋರಿದರು.
ಬಿಲ್ಲವ ಸಮುದಾಯದ ಕ್ರಿಕೆಟ್ ಪಟುಗಳಿಗಾಗಿ ಈ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಹಲವು ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿವೆ.
ಕ್ರೀಡೆ ಭವಿಷ್ಯ ರೂಪಿಸುತ್ತದೆ: ಶಾಸಕ ಪೊನ್ನಣ್ಣ;
ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, "ಇಂದು ವಿಶ್ವವಿಖ್ಯಾತಿ ಪಡೆದಿರುವ ಕ್ರಿಕೆಟ್ ಕ್ರೀಡೆಯ ಮೆರುಗು ಕೊಡಗಿನಲ್ಲೂ ವ್ಯಾಪಕವಾಗಿ ಹಬ್ಬಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಅನೇಕ ಕ್ರಿಕೆಟ್ ಪಂದ್ಯಾಟಗಳು ನಡೆಯುತ್ತಿವೆ. ಸಮುದಾಯಗಳ ನಡುವೆ ನಡೆಯುವ ಇಂತಹ ಪಂದ್ಯಾಟಗಳು ಆಯಾ ಸಮುದಾಯದ ಉತ್ತಮ ಆಟಗಾರರನ್ನು ಗುರುತಿಸಲು ಸಹಕಾರಿಯಾಗಿದೆ. ಅನೇಕ ಕ್ರೀಡಾಪಟುಗಳು ತಮ್ಮ ಭವಿಷ್ಯ ರೂಪಿಸಲು ಇಂತಹ ಪಂದ್ಯಾಟಗಳು ವೇದಿಕೆಯಾಗುತ್ತವೆ. ಯುವಜನತೆ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಬೇಕು" ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್, ಉಪಾಧ್ಯಕ್ಷ ಬಿ.ಎಸ್.ಪುರುಷೋತ್ತಮ್, ಮಾಜಿ ಅಧ್ಯಕ್ಷ ಚಂದ್ರಶೇಖರ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.