Kodagu

ಟಿ.ಶೆಟ್ಟಿಗೇರಿ, ಚೀಪೆಕೊಲ್ಲಿ, ಶ್ರೀಮಂಗಲದಲ್ಲಿ ಗಣೇಶೋತ್ಸವದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಭಾಗಿ

admincoorgdaily

ಟಿ.ಶೆಟ್ಟಿಗೇರಿ, ಚೀಪೆಕೊಲ್ಲಿ, ಶ್ರೀಮಂಗಲದಲ್ಲಿ ಗಣೇಶೋತ್ಸವದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಭಾಗಿ
ಪೊನ್ನಂಪೇಟೆ:ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ, ಚೀಪೆಕೊಲ್ಲಿ, ಶ್ರೀಮಂಗಲ ಭಾಗಗಳಲ್ಲಿ ಅತ್ಯಂತ ಭಕ್ತಿ ಭಾವ ಹಾಗೂ ಅದ್ದೂರಿಯಿಂದ ಆಚರಿಸುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ, ಸುಭಿಕ್ಷೆಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಟಾಟು ಮೊಣಪ್ಪ, ಡಿಸಿಸಿ ಸದಸ್ಯ ಪೆಮ್ಮಂಡ ರಾಜ ಕುಶಾಲಪ್ಪ, ಮುಖಂಡರಾದ ಮೋಟಯ್ಯ, ವಿಶು, ಉದಯ, ಪಾಲ್ವಿನ್ ಪೂಣಚ್ಚ, ಸೋಮಣ್ಣ, ವಕೀಲ ಎಂ.ಟಿ ಕಾರ್ಯಪ್ಪ, ಕೊಲ್ಲಿರ ಬೋಪಣ್ಣ, ಕುಂಡಚ್ಚಿರ ಮಂಜು ದೇವಯ್ಯ, ಜಗದೀಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.