Kodagu

ಬೆಟ್ಟಗೇರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ: ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

admincoorgdaily

ಬೆಟ್ಟಗೇರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ: ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
ಮಡಿಕೇರಿ;ತಾಲೂಕಿನ ನಾಪೋಕ್ಲು ಹೋಬಳಿಯ ಬೆಟ್ಟಗೇರಿ ಭಾಗಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು.

ಸ್ಥಳೀಯರ ಕೋರಿಕೆಯಂತೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.

ಈ ಹಿಂದೆ ಗ್ರಾಮಸ್ಥರು ಸಮುದಾಯ ಭವನದ ಅಗತ್ಯವನ್ನು ಶಾಸಕರ ಗಮನಕ್ಕೆ ತಂದಿದ್ದು, ಸ್ಥಳ ಪರಿಶೀಲಿಸಿ ತೀರ್ಮಾನಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಅದರಂತೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಶಾಸಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ವಲಯ ಅಧ್ಯಕ್ಷ ಕೊಡಗನ ತೀರ್ಥ ಪ್ರಸಾದ್, ಪಂಚಾಯಿತಿ ಮಾಜಿ ಅಧ್ಯಕ್ಷೆ ಕಮಲಾ ಉತ್ತಯ್ಯ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ವಲಯ ಕಾರ್ಯದರ್ಶಿ ಮಜೀದ್, ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಗೌರೀಶ್ ರೈ, ಮುಖಂಡರಾದ ಕೇಟೋಳಿ ಮೋಹನ್ ರಾಜ್, ಕೆ.ಕುಮಾರ್, ಪ್ರತಾಪ್, ಅಕಾಡೆಮಿ ಸದಸ್ಯ ಗಣೇಶ, ಪಟ್ಟಡ ದೀಪಕ್, ಪೊನ್ನಪ್ಪ, ಆಪ್ರು ರವೀಂದ್ರ, ಪಿಯೂಸ್ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.