Kodagu

ಕಾವೇರಿ ತೀರ್ಥೋದ್ಭವ ಪೂರ್ವ ತಯಾರಿ ಪರಿಶೀಲನೆ: ಭಾಗಮಂಡಲ, ತಲಕಾವೇರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ

admincoorgdaily

ಕಾವೇರಿ ತೀರ್ಥೋದ್ಭವ ಪೂರ್ವ ತಯಾರಿ ಪರಿಶೀಲನೆ: ಭಾಗಮಂಡಲ, ತಲಕಾವೇರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ
ಮಡಿಕೇರಿ: ನಾಳೆ ನಡೆಯುವ ಪವಿತ್ರ ಕಾವೇರಿ ತೀರ್ಥೋದ್ಭವದ ಪೂರ್ವ ತಯಾರಿಯ ವೀಕ್ಷಣೆಗಾಗಿ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ರವರು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಸರ್ಕಾರದ ವತಿಯಿಂದ ಒದಗಿಸಿದ ರೂ.1 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಭಂಡಾರ ಮನೆಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು. ಬಳಿಕ ತಲಕಾವೇರಿ ಪವಿತ್ರ ತೀರ್ಥೋದ್ಭವದ ಸಂಬಂಧ ಕೈಗೊಂಡಿರುವ ಪೂರ್ವಭಾವಿ ತಯಾರಿ ಕಾಮಗಾರಿಗಳು ಹಾಗೂ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ಬಳಿಕ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಾನ್ಯ ಶಾಸಕರು, ಸಾವಿರಾರು ಭಕ್ತಾದಿಗಳು ಆಗಮಿಸುವ ಪವಿತ್ರ ಶ್ರೀ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ಸಕಲ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾನಂಡ ಪ್ರತ್ಯು, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕತ್ ಆಲಿ, ಬಗರ್ ಹುಕುಂ ಅಧ್ಯಕ್ಷರು ನೆರವಂಡ ಉಮೇಶ್, ವಲಯ ಅಧ್ಯಕ್ಷರು ವೆಂಕಟೇಶ್ ಕೋಳಿಬೈಲು, ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರು ಗೌರೀಶ್ ರೈ, ಕರಿಕೆ ಪಂಚಾಯತ್ ಮಾಜಿ ಅಧ್ಯಕ್ಷರು, ಪಕ್ಷದ ಮುಖಂಡರು ಬಾಲಚಂದ್ರ ನಾಯರ್, ಪ್ರಕಾಶ್ ಕುದುಪಾಜೆ, ಮೋಟಯ್ಯ, ರಮೇಶ್, ಕುಶಾಲಪ್ಪ, ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಚೋಡುಮಾಡ ರಾಜ ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಹರ್ಷ, ಕೊಕ್ಕಲೆರ ತಿಮ್ಮಯ್ಯ, ಕೆದಂಬಾಡಿ ರಘುನಾಥ್, ಲಕ್ಷ್ಮಣ್, ಕೆ.ಪಿ.ಪೊನ್ನಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.