ಕೆದಮುಳ್ಳೂರಿನಲ್ಲಿ ಸಮುದಾಯ ಭವನ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ
admincoorgdaily

ವಿರಾಜಪೇಟೆ:ಕೆದಮುಳ್ಳೂರು ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿದರು.
ಕೆದಮುಳ್ಳೂರು ಸಹಕಾರ ಧವಸ ಭಂಡಾರದ ಸಮುದಾಯ ಭವನ ಹಾಗೂ ಪ್ರವೇಶ ದ್ವಾರವನ್ನು ಶಾಸಕರ ವಿಶೇಷ ಅನುದಾನದಡಿ ₹38 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಭಿವೃದ್ಧಿ ಹಾಗೂ ಉನ್ನತಿಗಾಗಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಳಮಾಂಡ ನೈನಾ ಜಗತ್, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ಪ್ರಶಾಂತ್ ಉತ್ತಪ್ಪ, ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್, ಪಂಚಾಯತ್ ಮಾಜಿ ಸದಸ್ಯರು ಇಸ್ಮಾಯಿಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಉದಯ್ ಮಾದಪ್ಪ, ಪಕ್ಷದ ಮುಖಂಡರು ಬೆಲ್ಲುಗೋಪಯ್ಯ, ಎಂ ವೈ ಆಲಿ, ವಿಜಯಕುಮಾರ್, ಕರಿನೇರವಂಡ ಜಿತನ್, ಧ್ಯಾನಿ, ಮಿಟ್ಟು ಅಯ್ಯಪ್ಪ, ಜಪ್ರಿ ಉತ್ತಪ್ಪ, ಜೀವನ್, ಮುದ್ದಯ್ಯ, ದೀಪಕ್, ಜಾಲು ಚಂಗಪ್ಪ, ಬಟ್ಟಕಾಳಂಡ ರಾಜ ದಿನೇಶ್, ಕಾಳಮಾಂಡ ಜಗತ್, ಸಹದೇವ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.