Kodagu

ಐನ್ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

admincoorgdaily

ಐನ್ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ
ಮಡಿಕೇರಿ;ತಾಲೂಕು ನಾಪೋಕ್ಲು ಹೋಬಳಿಯ ಹೆರವನಾಡು, ಬೆಟ್ಟಗೇರಿ, ಕಾರುಗುಂದ ಭಾಗಕ್ಕೆ, ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ಭೇಟಿ ನೀಡಿದರು.

    ಈ ಭಾಗದಲ್ಲಿರುವ ಕೊಕ್ಕಂಡ ಕುಟುಂಬಸ್ಥರ ಐನ್ ಮನೆಗೆ, ಪಟ್ಟಡ ಕುಟುಂಬಸ್ಥರ ಮನೆಗೆ, ಬಾಲಡಿ ಕುಟುಂಬಸ್ಥರ ಮನೆಗೆ, ಗುಡ್ಡನ ಮನೆ, ಪುದಿಯತಂಡ ಮನೆ, ಕೊಡಗನ ಮನೆ, ತೇನನ ಮನೆ ಹಾಗೂ ಅಜ್ಜಟ್ಟಿರ ಮನೆಗಳಿಗೆ ಹಾದು ಹೋಗುವ ರಸ್ತೆಯ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು.

ಸದರಿ ಐನ್ ಮನೆ ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದ ₹ 25ಲಕ್ಷ ಲಕ್ಷಗಳನ್ನು ಒದಗಿಸಿರುವುದಾಗಿ ಮಾನ್ಯ ಶಾಸಕರು ತಿಳಿಸಿದರಲ್ಲದೆ ಶೀಘ್ರದಲ್ಲೇ ಅತ್ಯಂತ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಸ್ಥಳದಲ್ಲಿ ಉಪಸ್ಥಿತರಿದ್ದ ಗುತ್ತಿಗೆದಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಸೌಕತ್ ಆಲೀ, ವಲಯ ಅಧ್ಯಕ್ಷರು ಕೊಡಗನ ತೀರ್ಥ ಪ್ರಸಾದ್, ಪಂಚಾಯಿತಿ ಮಾಜಿ ಅಧ್ಯಕ್ಷರು ಕಮಲಾ ಉತ್ತಯ್ಯ,ಡಿಸಿಸಿ ಉಪಾಧ್ಯಕ್ಷರು ಅಬ್ದುಲ್ ರೆಹಮನ್, ಮಾಜಿ ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಕಾರ್ಯದರ್ಶಿ ಮಜೀದ್, ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರು ಗೌರೀಶ್ ರೈ, ಪಕ್ಷದ ಮುಖಂಡರುಗಳು ಕೇಟೋಳಿ ಮೋಹನ್ ರಾಜ್, ಕೆ ಕುಮಾರ್, ಪ್ರತಾಪ್, ಅಕಾಡೆಮಿ ಸದಸ್ಯರು ಗಣೇಶ, ಪಟ್ಟಡ ದೀಪಕ್, ಪೊನ್ನಪ್ಪ, ಆಪ್ರು ರವೀಂದ್ರ, ಪಿಯೂಸ್, ಸ್ಥಳೀಯ ಪ್ರಮುಖರು, ಉಪಸ್ಥಿತರಿದ್ದರು.