Kodagu

ಗೋಣಿಕೊಪ್ಪ ಬೈಪಾಸ್ ರಸ್ತೆ ಅಭಿವೃದ್ಧಿಗೆ 48 ಲಕ್ಷ ರೂ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

admincoorgdaily

ಗೋಣಿಕೊಪ್ಪ ಬೈಪಾಸ್ ರಸ್ತೆ ಅಭಿವೃದ್ಧಿಗೆ 48 ಲಕ್ಷ ರೂ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ
ಗೋಣಿಕೊಪ್ಪ: ಗೋಣಿಕೊಪ್ಪ ಬೈಪಾಸ್ ರಸ್ತೆಗೆ ನೂತನ ಕಾಯಕಲ್ಪ ನೀಡಲು ಮಾನ್ಯ ಶಾಸಕರು ರೂ 48ಲಕ್ಷ ವೆಚ್ಚದ ವಿಶೇಷ ಅನುದಾನ ಒದಗಿಸಿದ್ದು, ಸದ್ರಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭ ಸ್ವತಃ ಶಾಸಕರು ಜೆಸಿಬಿ ಯಂತ್ರ ಚಾಲಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮೀದೇರಿರ ನವೀನ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನoಪೇಟೆ  ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಆಶಾ ಪೂಣಚ್ಚ, ಪೊನ್ನಂಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಂಡ ದೇವಯ್ಯ, ವಿರಾಜಪೇಟೆ ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಆರ್ ಕೆ ಸಲಾಂ, ಡ್ಯಾನ್ ಸುಬ್ಬಯ್ಯ, ಪಕ್ಷದ ಮುಖಂಡರು ರಾಜಶೇಖರ್, ಮಾಳೇಟಿರ ಬೋಪಣ್ಣ, ಪ್ರದೀಪ್, ಕುಂಡಚ್ಚಿರ ಮಂಜು ದೇವಯ್ಯ, ತಂಬಿ ,ರಾಜೇಶ್ ರೈ ,ಶೇಖರ್, ನಾಚಪ್ಪ, ಕಲೀದ್, ಅನಿಶ್, ಪಕ್ಷದ ಮುಖಂಡರು ಕಾರ್ಯಕರ್ತರು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.