ಕಾಫಿ ದಸರಾಗೆ ಶಾಸಕ ಡಾ.ಮಂತರ್ ಗೌಡ ಚಾಲನೆ
admincoorgdaily


ಮಡಿಕೇರಿ;ಕಾಫಿ ದಸರಾಗೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಮಡಿಕೇರಿಯಲ್ಲಿ ಉತ್ತಮ ಪರಿಸರ ಮತ್ತು ಶುಚಿತ್ವ ಕಾಪಾಡುವಲ್ಲಿ ಪೌರ ಕಾರ್ಮಿಕರ ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆ ಶ್ಲಾಘನೀಯ ಎಂದರು.
ಪೌರ ಕಾರ್ಮಿಕರ ಸಮಾಜಮುಖಿ ಕರ್ತವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಆ ನಿಟ್ಟಿನಲ್ಲಿ ನಮ್ಮ ಮನೆ ಮತ್ತು ಸುತ್ತ ಮುತ್ತಲಿನ ಪರಿಸರ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಂಡಲ್ಲಿ ಪೌರ ಕಾರ್ಮಿಕರ ಕಾರ್ಯ ಕಡಿಮೆ ಮಾಡಬಹುದು ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ದಸರಾ ಮುಗಿದ ಮರು ದಿನವೇ ತಮ್ಮ ಜತೆ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಲಾಗುವುದು ಎಂದು ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸ್ವಚ್ಚತಾ ಸೇನಾನಿಗಳಾದ ಸುಮಾರು 60 ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಶಾಸಕರು ಸನ್ಮಾನಿಸಿದರು.
ಭಾರತೀಯ ಕಾಫಿ ಮಂಡಳಿ ಸೇರಿದಂತೆ 50 ಕ್ಕೂ ಹೆಚ್ಚು ಕಾಫಿ ಮಳಿಗೆಗಳು ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಹಲವು ಇಲಾಖೆಯಿಂದ ಮಾಹಿತಿ ಮಳಿಗೆಗಳು ಗಮನ ಸೆಳೆದವು.
ಮಳಿಗೆಗಳಿಗೆ ಶಾಸಕರು ಭೇಟಿ ನೀಟಿ ಮಾಹಿತಿ ಪಡೆದರು, ಜತೆಗೆ ಕಾಫಿ ಸವಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್, ಉಪಾಧ್ಯಕ್ಷರಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ಕಾಫಿ ದಸರಾ ಸಮಿತಿ ಸಂಚಾಲಕರಾದ ಅನಿಲ್ ಎಚ್ ಟಿ, ನಗರಸಭೆ ಸದಸ್ಯರಾದ ಸತೀಶ್, ಪ್ರಮುಖರಾದ ಅಂಬೆಕಲ್ಲು ಕುಶಾಲಪ್ಪ, ನಂದಾ ಬೆಳ್ಯಪ್ಪ, ಪ್ರಕಾಶ್ ಆಚಾರ್ಯ, ಬಿ.ಜಿ.ಅನಂತ ಶಯನ, ಜಿ.ಚಿದ್ವಿಲಾಸ್, ಕವನ್, ಮೋಹನ್, ಜಗದೀಶ್, ರಮೇಶ್, ಚುಮ್ಮಿ ದೇವಯ್ಯ ದಸರಾ ಸಮಿತಿ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.