Kodagu

ಶನಿವಾರದ ಜನಾಂದೋಲನ ಸೇವಾ ಸಭೆಯಲ್ಲಿ ಪಾಲ್ಗೊಳ್ಳಿ ಶಾಸಕ ಡಾ. ಮಂತರ್ ಗೌಡ

admincoorgdaily

ಶನಿವಾರದ ಜನಾಂದೋಲನ ಸೇವಾ ಸಭೆಯಲ್ಲಿ ಪಾಲ್ಗೊಳ್ಳಿ  ಶಾಸಕ ಡಾ. ಮಂತರ್ ಗೌಡ
ಮಡಿಕೇರಿ:
ಸೆಪ್ಟೆಂಬರ್ 05ರ ಶನಿವಾರ ಬೆಳಗ್ಗೆ 11 ಗಂಟೆಗೆ   ರಾಜ್ಯ ಸರ್ಕಾರದ ಪ್ರಮುಖ ಯೋಜನೆ ಆಗಿರುವ ಜನಾಂದೋಲನ ಸೇವೆಯನ್ನು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ 
ಆಯೋಜಿಸಲಾಗಿದೆ.

 ಪ್ರತಿ ಶನಿವಾರ ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಯೋಜನೆ ಇದಾಗಿದೆ.

 ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಟಿ. ನರೇಂದ್ರಸ್ವಾಮಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ  ಮಡಿಕೇರಿಯ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ

ಜನಾಂದೋಲನ ಸಭೆ ಆಯೋಜಿಸಿದ್ದು,  ಜಿಲ್ಲೆ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ  ಸಾರ್ವಜನಿಕರು ತಮ್ಮ ಅಹವಾಲು ಜೊತೆ ಆಂದೋಲನಕ್ಕೆ ಆಗಮಿಸಿ, ತಮ್ಮ ಸಮಸ್ಯೆಗಳಿಗೆ ಪರಿಹಾರ
ಕಂಡುಕೊಳ್ಳುವoತೆ ಮಡಿಕೇರಿ ಶಾಸಕ 
ಡಾ. ಮಂತರ್ ಗೌಡ ಅವರು ಮನವಿ ಮಾಡಿದ್ದಾರೆ.