Kodagu

ಅಂಗಾಂಗ ದಾನ ಮಾಡಿದ ಯುವಕ ಯೋಗೇಶ್ ಅವರ ಮನೆಗೆ ಶಾಸಕ ಡಾ. ಮಂತರ್ ಗೌಡ ಭೇಟಿ;ಪೋಷಕರಿಗೆ ಸಾಂತ್ವನ

admincoorgdaily

ಅಂಗಾಂಗ ದಾನ ಮಾಡಿದ ಯುವಕ ಯೋಗೇಶ್ ಅವರ ಮನೆಗೆ ಶಾಸಕ ಡಾ. ಮಂತರ್ ಗೌಡ ಭೇಟಿ;ಪೋಷಕರಿಗೆ ಸಾಂತ್ವನ
ಮಡಿಕೇರಿ; ಶಾಸಕರಾದ ಡಾ. ಮಂತರ್ ಗೌಡ ಅವರು  ಮಡಿಕೇರಿಗೆ ಆಗಮಿಸಿದ ತಕ್ಷಣವೇ, ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗಗಳನ್ನು ದಾನ ಮಾಡಿ ಹಲವರ ಬದುಕಿಗೆ ಬೆಳಕಾದ 22 ವರ್ಷದ ಯುವಕ ಯೋಗೇಶ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಯೋಗೇಶ್ ಅವರ ಪೋಷಕರನ್ನು ಭೇಟಿಯಾಗಿ ದುಃಖದಲ್ಲಿ ಸಾಂತ್ವನ ಹೇಳಿ, ಕುಟುಂಬದ ನೋವಿನಲ್ಲಿ ಭಾಗಿಯಾದರು. ಕಿರಿಯ ವಯಸ್ಸಿನಲ್ಲಿಯೇ ಅಂಗಾಂಗ ದಾನದ ಮೂಲಕ ಹಲವು ಜೀವಗಳಿಗೆ ಮರುಜೀವ ನೀಡಿದ ಯೋಗೇಶ್ ಅವರ ಕಾರ್ಯ ಮಾನವೀಯತೆ ಮತ್ತು ಸಮಾಜಕ್ಕೆ ಮಾದರಿಯಾಗಿದೆ. ಅವರ ಈ ಸೇವಾ ಮನೋಭಾವ ಸದಾ ಸ್ಮರಣೀಯ ಎಂದು ಕುಟುಂಬದವರಿಗೆ ಧೈರ್ಯ ತುಂಬಿದರು.


ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಎಚ್. ಎ., ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮೂಡ ಸದಸ್ಯರಾದ ಚಂದ್ರಶೇಖರ್ ಆರ್. ಪಿ. ಹಾಗೂ ಮಿನಾಜ್ ಪ್ರವೀಣ್, ಪ್ರಚಾರ ಸಮಿತಿ ಬ್ಲಾಕ್ ಅಧ್ಯಕ್ಷರಾದ ವಿ. ಜಿ. ಮೋಹನ್, ಸದಾ ಮುದ್ದಪ್ಪ, ಮಾಜಿ ನಗರಸಭಾ ಅಧ್ಯಕ್ಷರಾದ  ಜುಲೆಕಾಬಿ, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕವನ್ ಕೊತ್ತೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಶಿ, ಕಾಂಗ್ರೆಸ್ ಮುಖಂಡರಾದ ಅಂಬೆಕಲ್ ನವೀನ್, ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಸೇರಿದಂತೆ ನಿರಂಜನ್, ಪ್ರತಾಪ್, ಸುಬ್ರಮಣಿ, ಕೀರ್ತನ್, ಶ್ರೀಮತಿ ಪೊನ್ನು, ಪವಿತ್ರ, ಶೇಕ್ ಅಹಮದ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.