Kodagu

ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಒಂಟಿಯಂಗಡಿಯಲ್ಲಿ 4 ಕೋಟಿ ಮೊತ್ತದ ಕಾಮಗಾರಿಗೆ ಶಾಸಕರಿಂದ ಚಾಲನೆ

admincoorgdaily

ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯ ಒಂಟಿಯಂಗಡಿಯಲ್ಲಿ 4 ಕೋಟಿ ಮೊತ್ತದ ಕಾಮಗಾರಿಗೆ ಶಾಸಕರಿಂದ ಚಾಲನೆ
ಕುಶಾಲನಗರ:ವಾಲ್ನೂರು-ತ್ಯಾಗತ್ತೂರು ಗ್ರಾ,ಪಂ. ವ್ಯಾಪ್ತಿಯ ಒಂಟಿಯಂಗಡಿಯಲ್ಲಿ 4 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ಮೂಲಕ 4 ಕೋಟಿ ರೂ. ವೆಚ್ಚದಲ್ಲಿ ಅಭ್ಯತ್ ಮಂಗಲ ಒಂಟಿಯಂಗಡಿ ವಾಲ್ನೂರು ತ್ಯಾಗತ್ತೂರು ಗ್ರಾಮದ ವ್ಯಾಪ್ತಿ ಗೆ ಬರುವ 4 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ನೀರಾವರಿ ನಾಲೆಗೆ ಕಾಂಕ್ರಿಟ್ ಲೈನಿಂಗ್ ಹಾಗೂ ತಡೆಗೋಡೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ರೈತರು ಹಾಗೂ ಗ್ರಾಮಸ್ಥರು ಅಗತ್ಯ ಸಹಕಾರ ನೀಡಬೇಕು. ಕೆಲವು ದಿನಗಳ ಅನಾನುಕೂಲತೆಯನ್ನು ಬದಿಗೊತ್ತಿ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಲ್ಲಿ ಪೂರ್ಣಗೊಳಿಸಲು ಕೈಜೋಡಿಸಬೇಕು ಎಂದು ಕೋರಿದರು.

ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಶಾಸಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಿತಾ ಮಂಜುನಾಥ್ ತಾಲೂಕು ಕೆ ಡಿ ಪಿ ಸಧಸ್ಯರಾದ ಎ ಎಂ ಹನೀಫ, ಪಕ್ಷದ ಮಖಂಡರಾದ ಹಕೀಮ್ ನಲ್ಯಾಹುದೀಕೇರಿ ಮುಸ್ತಫಾ ಕೆ ಎಂ  ಯಶ್ ದೋಲ್ಪಾಡಿ ಹನೀಫ ತ್ಯಾಗತ್ತೂರು ಪವಿತ್ರ ಅಭ್ಯತ್ ಮಂಗಲ ಸುದೇಶ್ ತ್ಯಾಗತ್ತೂರು ಮಜೀದ್ ಅಭ್ಯತ್ ಮಂಗಲ ಮತ್ತು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ಮತ್ತಿತರರು ಇದ್ದರು.