Kodagu

ಆನೆಕಾಡಿನಲ್ಲಿ ಅಪಘಾತದಲ್ಲಿ ಮೃತಪಟ್ಟ ಹೊಸಕೋಟೆ ಉಣ್ಣಿ ಕುಟುಂಬಕ್ಕೆ ಶಾಸಕ ಮಂತರ್ ಗೌಡ ಸಾಂತ್ವನ

admincoorgdaily

ಆನೆಕಾಡಿನಲ್ಲಿ ಅಪಘಾತದಲ್ಲಿ ಮೃತಪಟ್ಟ ಹೊಸಕೋಟೆ ಉಣ್ಣಿ ಕುಟುಂಬಕ್ಕೆ ಶಾಸಕ ಮಂತರ್ ಗೌಡ ಸಾಂತ್ವನ
ಕುಶಾಲನಗರ;ಇತ್ತೀಚೆಗೆ ಆನೆಕಾಡು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಹೊಸಕೋಟೆಯ ಉಣ್ಣಿ ಅವರ ಕುಟುಂಬಕ್ಕೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಮನೆಗೆ ತೆರಳಿ ಕುಟುಂಬದ ಸ್ಥಿತಿಯನ್ನು ನೋಡಿದಾಗ ಮನ ಮಿಡಿಯುವ ದೃಶ್ಯ ಕಂಡು ಬಂದಿತು. ನಾಲ್ಕು ವರ್ಷ ಮತ್ತು 9 ವರ್ಷದ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ನೋಡಿ ಶಾಸಕರು ಭಾವುಕರಾದರು.

ತಕ್ಷಣವೇ ಉಣ್ಣಿ ಅವರ ಪತ್ನಿಗೆ ನೆರವಾಗಲು ಮುಂದಾದ ಶಾಸಕರು, ಕುಟುಂಬದ ನಿರ್ವಹಣೆಗಾಗಿ ಪತ್ನಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು. ಜೊತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.