Kodagu

ಸ್ವಾಗತ ಕಮಾನು ಉದ್ಘಾಟಿಸಿದ ಶಾಸಕ ಮಂತರ್ ಗೌಡ

admincoorgdaily

ಸ್ವಾಗತ ಕಮಾನು ಉದ್ಘಾಟಿಸಿದ ಶಾಸಕ ಮಂತರ್ ಗೌಡ
ಸಿದ್ದಾಪುರ :-
ಅರೆಕಾಡು ಬಿ. ಚಾಮುಂಡೇಶ್ವರಿ (ಐದ್ರೋಡಮ್ಮ) ದೇವಾಲಯದ ಅತ್ತಿಮಂಗಲದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಗತ ಕಮಾನನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದೇವಾಲಯದ ಅಭಿವೃದ್ಧಿ ಹಾಗೂ ಧಾರ್ಮಿಕ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಪ್ಪು ರವೀಂದ್ರ, ಪ್ರಭು ಶೇಖರ್, ಕುಶಾಲಪ್ಪ, ತಿರುಮಾಲ್ ರಾಜ, ಆನಂದ್, ರಘು, ಲೋಕೇಶ್, ರಮೇಶ್ ಸೇರಿದಂತೆ ಸ್ಥಳೀಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.