Kodagu

ಬೆಸಗೂರು ಗ್ರಾಮದಲ್ಲಿ ₹1.50 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ

admincoorgdaily

ಬೆಸಗೂರು ಗ್ರಾಮದಲ್ಲಿ ₹1.50 ಕೋಟಿ ರಸ್ತೆ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ
ಪೊನ್ನಂಪೇಟೆ:*ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಇಂದು ಭೇಟಿ ನೀಡಿದರು.

ಈ ಭಾಗದಲ್ಲಿ ತೀವ್ರ ಮಳೆಯಿಂದ ಹಾಳಾಗಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಮಳೆಯ ತೀವ್ರತೆಯಿಂದ ಬೆಸಗೂರು ಸೇತುವೆಯಿಂದ ಬೆಕ್ಕೆಸೊಡ್ಲೂರು ಭಾಗದವರೆಗೆ ರಸ್ತೆ ತೀವ್ರವಾಗಿ ಹಾನಿಗೊಳಗಾಗಿದೆ. ಇದರ ಅಭಿವೃದ್ಧಿಗಾಗಿ ₹1 ಕೋಟಿ 50 ಲಕ್ಷ ಅನುದಾನ ನೀಡಲಾಗಿದ್ದು, ಇದನ್ನು ಸದ್ಬಳಕೆ ಮಾಡಿ ಉತ್ತಮ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ಚೆಟ್ಟಿಮಾಡ ರೋಬಿನ್ ಬೋಪಣ್ಣ, ನಲ್ಲೂರು ಬೂತ್ ಅಧ್ಯಕ್ಷ ಅಶೋಕ, ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರಾದ ಶಂಭು, ಪವನ್, ನವೀನ್, ಶಂಕರಿ, ಹರೀಶ್, ಸಚಿನ್, ಕುಟ್ಟಪ್ಪ, ನಟೇಶ್, ಅಪ್ಪಣ್ಣ ಉಪಸ್ಥಿತರಿದ್ದರು.