Kodagu

ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮಗೆ ವಿಡಿಯೋ ಕಾಲ್ ಮೂಲಕ ಶಾಸಕ ಪೊನ್ನಣ್ಣ ಅಭಿನಂದನೆ

admincoorgdaily

ಏಷ್ಯನ್ ಗೇಮ್ಸ್ ಪದಕ ವಿಜೇತೆ ಪೂವಮ್ಮಗೆ ವಿಡಿಯೋ ಕಾಲ್ ಮೂಲಕ ಶಾಸಕ ಪೊನ್ನಣ್ಣ ಅಭಿನಂದನೆ
ಮಡಿಕೇರಿ;
ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕೊಡಗಿನ ಕುವರಿ ಎಂ.ಆರ್.ಪೂವಮ್ಮ ಅವರಿಗೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಅಭಿನಂದಿಸಿದರು.
ಪೂವಮ್ಮ ಅವರ ಸಾಧನೆಯನ್ನು ಶ್ಲಾಘಿಸಿದ ಶಾಸಕರು, ಮುಂದಿನ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.