Kodagu

ಪೆರಾಜೆಯಲ್ಲಿ ವಿವಿಧ ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಪೊನ್ನಣ್ಣ

admincoorgdaily

ಪೆರಾಜೆಯಲ್ಲಿ ವಿವಿಧ ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ಪೊನ್ನಣ್ಣ
ಪೆರಾಜೆ: ಪೆರಾಜೆ ಭಾಗದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳನ್ನು ಶಾಸಕರು ಇಂದು ಲೋಕಾರ್ಪಣೆಗೊಳಿಸಿ ಶುಭ ಕೋರಿದರು.

ನಿಡ್ಯಮಲೆ ಕುಟುಂಬಸ್ಥರು, ಬಂಗಾರಕೋಡಿ ಕುಟುಂಬಸ್ಥರು, ಮಜಿಕೋಡಿ ಕುಟುಂಬಸ್ಥರು, ಹೊದ್ದೆಟ್ಟಿ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ ಹಾಗೂ ಕನ್ನಡ ಪೆರಾಜೆ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಶೌಕತ್ ಆಲಿ, ವಲಯ ಅಧ್ಯಕ್ಷ ಜೈರಾಮ್ ಪೆರುಮುಂಡ, ಪ್ರಮುಖರಾದ ತುಳಸಿ ಗಾಂಧಿ ಪ್ರಸಾದ್, ಸೂರಜ್ ಹೊಸೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.