Kodagu

ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಶಾಸಕ ಪೊನ್ನಣ್ಣರಿಂದ ಸ್ವಂತ ವೆಚ್ಚದಲ್ಲಿ ಟಿವಿ ಕೊಡುಗೆ

admincoorgdaily

ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಶಾಸಕ ಪೊನ್ನಣ್ಣರಿಂದ ಸ್ವಂತ ವೆಚ್ಚದಲ್ಲಿ ಟಿವಿ ಕೊಡುಗೆ
ವಿರಾಜಪೇಟೆ:ವಿರಾಜಪೇಟೆ ತಾಲೂಕು ಹೆಗ್ಗಳ ಭಾಗದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಟಿವಿ ಕೊಡುಗೆಯಾಗಿ ನೀಡಿದ್ದಾರೆ.

ಈ ಹಿಂದೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಮನರಂಜನೆಗಾಗಿ ಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಗಿತ್ತು. ನಿವಾಸಿಗಳ ಮನವಿಗೆ ಸ್ಪಂದಿಸಿದ ಶಾಸಕರು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಅದರಂತೆ, ಇಂದು ತಾವು ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ತಮ್ಮ ಕಾರ್ಯನಿರತ ವೇಳಾಪಟ್ಟಿಯ ನಡುವೆಯೂ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರ ಮೂಲಕ ಆಶ್ರಮಕ್ಕೆ ಟಿವಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ, ಇನ್ನೊಂದು ವಾರದೊಳಗೆ ಟೇಬಲ್ ವ್ಯವಸ್ಥೆಯನ್ನೂ ಕಲ್ಪಿಸಿಕೊಡುವುದಾಗಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಶಾಸಕರ ಪರವಾಗಿ ಆಶ್ರಮದ ಎಲ್ಲಾ ನಿವಾಸಿಗಳಿಗೆ ಕೇಕ್ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ಅವರೊಂದಿಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆಶ್ರಮದ ನಿವಾಸಿಗಳಿಗೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಕೂಡ ಮುಂದಿನ ದಿನಗಳಲ್ಲಿ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

ತಾವು ನೀಡಿದ ಭರವಸೆಯಂತೆ ನಡೆದುಕೊಂಡ ಶಾಸಕರ ಬದ್ಧತೆ ಹಾಗೂ ಉದಾರ ಮನೋಭಾವವನ್ನು ವೃದ್ಧಾಶ್ರಮದ ನಿವಾಸಿಗಳು ಮನದಾಳದಿಂದ ಪ್ರಶಂಸಿಸಿದರು. ತಮ್ಮ ಮನವಿಗೆ ಸ್ಪಂದಿಸಿ ನೆರವಿನ ಹಸ್ತ ಚಾಚಿದ ಶಾಸಕರ ಕಾರ್ಯವನ್ನು ಶ್ಲಾಘಿಸಿದ ಅವರು, ಶ್ರೀಮತಿ ಕಾಂಚನ್ ಪೊನ್ನಣ್ಣ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಲೆಕ್ಸ್ ಬ್ರಿಟೊ, ಕುಂಡಚ್ಚಿರ ಮಂಜು ದೇವಯ್ಯ, ಕಿಶೋರ್ ಹಾಗೂ ಲತೀಫ್ ಅವರು ಉಪಸ್ಥಿತರಿದ್ದರು.