Kodagu

ಪೊನ್ನಂಪೇಟೆಯಲ್ಲಿ ಕಾಳಿಮಾಡ ಕುಟುಂಬದ 'ಮಂಗಲ ಸಂಬಂಧ ಆಡುಕುವೊ ನಮ್ಮೆ'ಗೆ ಶಾಸಕ ಪೊನ್ನಣ್ಣ ಚಾಲನೆ

admincoorgdaily

ಪೊನ್ನಂಪೇಟೆಯಲ್ಲಿ ಕಾಳಿಮಾಡ ಕುಟುಂಬದ 'ಮಂಗಲ ಸಂಬಂಧ ಆಡುಕುವೊ ನಮ್ಮೆ'ಗೆ ಶಾಸಕ ಪೊನ್ನಣ್ಣ ಚಾಲನೆ
ಪೊನ್ನಂಪೇಟೆ, ಅ.11: ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಪೊನ್ನಂಪೇಟೆ ಭಾಗಕ್ಕೆ ಭೇಟಿ ನೀಡಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಾಳಿಮಾಡ ಕುಟುಂಬಸ್ಥರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾಳಿಮಾಡ ಕುಟುಂಬದಿಂದ ಕೊಡವ ಕೌಟುಂಬಿಕ ಪ್ರಥಮ "ಮಂಗಲ ಸಂಬಂಧ ಆಡುಕುವೊ ನಮ್ಮೆ" ಕಾರ್ಯಕ್ರಮಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಳಿಮಾಡ ಒಕ್ಕದ ಅಧ್ಯಕ್ಷ ಎಂ. ಮೋಟಯ್ಯ, ಕೊಡವ ಜಾನಪದ ತಜ್ಞ ಬಾಚಣಿಯಂಡ ಅಪ್ಪಣ್ಣ, ಒಕ್ಕದ ಕಾರ್ಯದರ್ಶಿ ರಶೀಕ್ ಕಾವೇರಪ್ಪ, ಸಂಚಾಲಕ ಪದ್ಮ ಬೆಳಿಯಪ್ಪ, ತೀರ್ಪುಗಾರರಾದ ಬೊಟ್ಟೋಳಂಡ ಪೊನ್ನಣ್ಣ, ಬೊಳ್ಳೇರ ಪ್ರಥ್ವಿ, ನೆಲ್ಲಮಾಡ ರಾಜ ತಿಮ್ಮಯ್ಯ, ಕರ್ತಮಾಡ ಹರೀಶ್, ಬೊಳ್ಳಿಮಾಡ ಧನು ದೇವಯ್ಯ, ಪೆಮ್ಮಂಡ ಪೊನ್ನಪ್ಪ, ಕಾಳಿಮಾಡ ಪ್ರಶಾಂತ್, ಕೊಲ್ಲಿರ ಬೋಪಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.