ಅವರೆಗುಂದ ಗ್ರಾಮದ ರಸ್ತೆಗೆ ಶಾಸಕ ಪೊನ್ನಣ್ಣ ನವರಿಂದ 50 ಲಕ್ಷ ರೂಗಳ ಅನುದಾನ
admincoorgdaily

ಸಿದ್ದಾಪುರ;
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಸಿದ್ದಾಪುರ ಪಂಚಾಯತಿಯ ಅವರೆಗುಂದ ಗ್ರಾಮದ ರಸ್ತೆ ಅಭಿವೃದ್ದಿಗೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಾದ ಎ.ಎಸ್.ಪೊನ್ನಣ್ಣ ನವರು 50 ಲಕ್ಷ ರೂಗಳ ಅನುದಾನ ಒದಗಿಸಿದ್ದು ಇಂದು ಶಾಸಕರ ಅನುಪಸ್ಥಿತಿಯಲ್ಲಿ ಗ್ರಾಮಸ್ಥರೊಂದಿಗೆ ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ.ಪ್ರತೀಶ್ ರವರು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಸ್ಥಳೀಯ ಜನರ ಕೋರಿಕೆಯನ್ನು ಪರಿಗಣಿಸಿ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಗ್ರಾಮದ ಇತಿಹಾಸ ದಲ್ಲಿಯೇ ದೊಡ್ಡ ಮೊತ್ತದ ಅನುದಾನವನ್ನು ನೀಡಿದ್ದಾರೆ ಎಂದು ಪ್ರತೀಶ್ ಹರ್ಷ ವ್ಯಕ್ತಪಡಿಸಿದರು.
ಅನುದಾನಕ್ಕೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಹಾಗೂ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ರವರಿಗೆ ಅಭಾರಿಯಾಗಿದ್ದೇವೆ ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಣಿ ರವರು ಮಾತನಾಡಿ ಎ.ಎಸ್.ಪೊನ್ನಣ್ಣ ನವರು ಶಾಸಕರಾಗಿ ಆಯ್ಕೆಯಾದ ನಂತರ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಕಾಮಗಾರಿಗಳು ನಡೆಯುತ್ತಿದ್ದು ಜನರು ಶಾಸಕರ ಬಳಿ ಹೋಗಿ ಮನವಿ ಸಲ್ಲಿಸುವಂತೆ ಮನವಿ ಮಾಡಿದರು.
ಸರ್ವ ಜನರನ್ನು ಸಮಾನವಾಗಿ ಕಾಣುವಂತಹ ಪೊನ್ನಣ್ಣ ನವರಂತಹ ಜನಪ್ರತಿನಿಧಿ ವಿರಾಜಪೇಟೆ ಕ್ಷೇತ್ರಕ್ಕೆ ಸಿಕ್ಕಿರುವುದು ಜನರ ಅದೃಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖ ಮುಖಂಡರಾದ ಜಾಫರ್ ಆಲಿ,ಬಾಳಾಡಿ ಪ್ರತಾಪ್ ಕುಮಾರ್,ಗಿರೀಶ್ ರೈ,
ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಿಲನ್,ಕರ್ಪಯ್ಯ,ಸರೋಜ,
ಗ್ರಾಮಸ್ಥರಾದ
ಸುನಿಲ್, ಮುತ್ತುಮಣಿ,ಮಹೇಶ್,ವಿಷ್ಣು ಗುತ್ತಿಗೆದಾರರಾದ ಸೋಮಯ್ಯ,
ಕೃಷ್ಣಪ್ಪ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.