ತೀರ್ಥೋದ್ಭವ ತಯಾರಿ ನಡುವೆ ಕೋಳಿಬೈಲು ಐನ್ ಮನೆ ತಡೆಗೋಡೆ ಪರಿಶೀಲಿಸಿದ ಶಾಸಕ ಪೊನ್ನಣ್ಣ
admincoorgdaily

ಭಾಗಮಂಡಲ: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಪೂರ್ವಭಾವಿ ತಯಾರಿ ವೀಕ್ಷಣೆಗೆ ಭಾಗಮಂಡಲ ಹಾಗೂ ತಲಕಾವೇರಿಗೆ ಆಗಮಿಸಿದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ರವರು ಈ ಭಾಗದಲ್ಲಿ ಕೋಳಿಬೈಲು ಐನ್ ಮನೆ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಡೆಗೋಡೆಯ ಕಾಮಗಾರಿಯನ್ನು ವೀಕ್ಷಿಸಿದರು.
ಈ ಹಿಂದೆ ಮಾನ್ಯ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದರು. ಅದರಂತೆ ಶಾಸಕರ ವಿಶೇಷ ಅನುದಾನದಲ್ಲಿ 25 ಲಕ್ಷ ರೂ.ಗಳನ್ನು ಒದಗಿಸಿದ್ದು, ಅದರಲ್ಲಿ ಈ ತಡೆಗೋಡೆಯ ಕಾಮಗಾರಿಯು ಪ್ರಗತಿಯಲ್ಲಿದೆ. ಇಂದು ಈ ಕಾಮಗಾರಿಯನ್ನು ವೀಕ್ಷಿಸಿದ ಮಾನ್ಯ ಶಾಸಕರು ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾನಂಡ ಪ್ರತ್ಯು, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕತ್ ಆಲಿ, ಬಗರ್ ಹುಕುಂ ಅಧ್ಯಕ್ಷರು ನೆರವಂಡ ಉಮೇಶ್, ಮಾಜಿ ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ವೆಂಕಟೇಶ್ ಕೋಳಿಬೈಲು, ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರು ಗೌರೀಶ್ ರೈ, ಪಕ್ಷದ ಮುಖಂಡರು ಬಾಲಚಂದ್ರ ನಾಯರ್, ಪ್ರಕಾಶ್ ಕುದುಪಾಜೆ, ಮೋಟಯ್ಯ, ರಮೇಶ್, ಕುಶಾಲಪ್ಪ, ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಚೋಡುಮಾಡ ರಾಜ ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಹರ್ಷ, ಕೊಕ್ಕಲೆರ ತಿಮ್ಮಯ್ಯ, ಕೆದಂಬಾಡಿ ರಘುನಾಥ್, ಲಕ್ಷ್ಮಣ್, ಕೆ.ಪಿ.ಪೊನ್ನಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.