ಬಲ್ಲಮಾವಟಿ ಗ್ರಾಮದಲ್ಲಿ ₹63 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪೊನ್ನಣ್ಣ ಚಾಲನೆ
admincoorgdaily

ಮಡಿಕೇರಿ:ತಾಲೂಕಿನ ನಾಪೋಕ್ಲು ಬ್ಲಾಕ್ ವ್ಯಾಪ್ತಿಯ ಬಲ್ಲಮಾವಟಿ ಗ್ರಾಮಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿದರು.
ಭೂಮಿಪೂಜೆ ನೆರವೇರಿಸಿದ ಕಾಮಗಾರಿಗಳು:
1)ಬಲ್ಲಮಾವಟಿ ಗ್ರಾಮದ ಮುಖ್ಯರಸ್ತೆಯಿಂದ ಬಲ್ಲಮಾವಟಿ-ಪೇರೂರು ಸಂಪರ್ಕ ಕಲ್ಪಿಸುವ ಚಾಮ ಮೂಲಕ ಹಾದುಹೋಗುವ ರಸ್ತೆ ಗುದ್ದಲಿ ಪೂಜೆ - ₹50 ಲಕ್ಷ
2)ದೊಡ್ಡ ಪುಲಿಕೋಟು ಗ್ರಾಮದ ಕೋಟೆ ಶ್ರೀ ಭಗವತಿ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ - ₹5 ಲಕ್ಷ (ದೇವಸ್ಥಾನ ಅಭಿವೃದ್ಧಿ ಕುರಿತು ಮನವಿ ಸಲ್ಲಿಕೆ)
3)ದೊಡ್ಡ ಪುಲಿಕೋಟು ಗ್ರಾಮದ ಪೊನ್ನುಕಂಡ ಕುಟುಂಬದ ಐನ್ ಮನೆ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ - ₹3 ಲಕ್ಷ ಹಾಗೂ ಟ್ರಾನ್ಸ್‌ಫಾರ್ಮರ್ ಉದ್ಘಾಟನೆ
4)ನೆಲಜಿ ಗ್ರಾಮದ ಮಣವಟ್ಟಿರ ಕುಟುಂಬದ ಐನ್ ಮನೆ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ - ₹5 ಲಕ್ಷ
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ಬಗರ್ ಹುಕುಂ ಅಧ್ಯಕ್ಷ ನೆರವಂಡ ಉಮೇಶ್, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಬಲ್ಲಮಾವಟಿ ವಲಯ ಅಧ್ಯಕ್ಷ ಮಣವಟ್ಟಿರ ದಯಾ ಚಿನ್ನಪ್ಪ, ಬಲ್ಲಮಾವಟಿ ಬೂತ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ನೆಲಜಿ ಬೂತ್ ಅಧ್ಯಕ್ಷ ಕೈಬುಲಿರ ಸಾಬು, ಪೇರೂರು ಬೂತ್ ಅಧ್ಯಕ್ಷ ಪಾಲೇಯಂಡ ಅಯ್ಯಪ್ಪ, ಸ್ಯಾಮ್ ಕಾಳಯ್ಯ, ಕಕ್ಕಬೆ ವಲಯ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ತಮ್ಮಯ್ಯ, ಹ್ಯಾರಿ ಸುಬ್ರಮಣಿ, ತೋಲಂಡ ನಂದ ದೇವಯ್ಯ, ಮಚ್ಚುರ ರವೀಂದ್ರ, ಕರವಂಡ ಲಿತಿನ್, ಕೆ.ಜಿ. ಪರಮೇಶ್ವರ, ಅಪ್ಪಚ್ಚಿರ ತಮ್ಮಯ್ಯ, ಕರವಂಡ ಲವ ನಾಣಯ್ಯ, ದಿನು ತಿಮ್ಮಯ್ಯ, ಬೆಲ್ಲು ಬೆಳಿಯಪ್ಪ, ದೇವಯ್ಯ, ಪ್ರೇಮ, ಸ್ವರೂಪ್, ಪ್ರಕಾಶ್, ಚರಣು, ಚೀಯಕ್ ಪೂವಂಡ ಸುನಿಲ್ ಮಾಚಯ್ಯ, ಹರೀಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.