ಅಮ್ಮತಿ;ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಭಾಗಿ
admincoorgdaily

ವಿರಾಜಪೇಟೆ:ತಾಲೂಕಿನ ಅಮ್ಮತಿ ಭಾಗದ ಶ್ರೀ ಗಜಾನನ ಗೆಳೆಯರ ಬಳಗ, ಶ್ರೀ ಚೌಡೇಶ್ವರಿ ರಾಮ ಮಂದಿರ ಸಮಿತಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಪಾಲ್ಗೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ವಲಯ ಅಧ್ಯಕ್ಷ ಪಾಳೆಯತಂಡ ಹರಿ, ಮಾಜಿ ಪಂಚಾಯತ್ ಸದಸ್ಯ ಹಂಸ, ಪಕ್ಷದ ಮುಖಂಡರಾದ ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ಆಪ್ರು ರವೀಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.