Kodagu

ಚೆನ್ನಯ್ಯನಕೋಟೆ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶಾಸಕ ಪೊನ್ನಣ್ಣರಿಂದ ಗಣೇಶೋತ್ಸವದಲ್ಲಿ ಭಾಗಿ

admincoorgdaily

ಚೆನ್ನಯ್ಯನಕೋಟೆ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶಾಸಕ ಪೊನ್ನಣ್ಣರಿಂದ ಗಣೇಶೋತ್ಸವದಲ್ಲಿ ಭಾಗಿ
ವಿರಾಜಪೇಟೆ:ನಾಡಿನಾದ್ಯಂತ ಸಂಭ್ರಮ ಹಾಗೂ ಭಕ್ತಿ ಭಾವದಿಂದ ಆಚರಿಸಲ್ಪಡುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಇಂದು ಭಾಗವಹಿಸಿದರು.

ತಾಲೂಕಿನ ಚೆನ್ನಯ್ಯನಕೋಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಆಯೋಜನೆಗೊಂಡ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಘ್ನ ನಿವಾರಕ ಶ್ರೀ ಸಿದ್ಧಿವಿನಾಯಕನು ಸಕಲ ಜೀವಕುಲಕ್ಕೆ ಹರಸಿ, ತನ್ನ ಭಕ್ತರು ಹಾಗೂ ನಾಡಿಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಶೀಲಾ ಶಂಕರ್, ಊರ ಹಿರಿಯರಾದ ಸಣ್ಣಯ್ಯ, ಲಕ್ಷ್ಮಣ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವೀಂದ್ರ ಭಾವೆ, ಮಾಲ್ದಾರೆ ಪಂಚಾಯಿತಿ ಮಾಜಿ ಸದಸ್ಯೆ ಮಾಲತಿ, ಪಕ್ಷದ ಮುಖಂಡರಾದ ಕುಂಡಚ್ಚಿರ ಮಂಜು ದೇವಯ್ಯ, ಉದಯ ಮಾದಪ್ಪ, ಸಿದ್ಧಿವಿನಾಯಕ ದೇವಸ್ಥಾನ ಸಮಿತಿ ಅಧ್ಯಕ್ಷ ಮನು, ಪ್ರಧಾನ ಕಾರ್ಯದರ್ಶಿ ಮಂಜು, ಉಪಾಧ್ಯಕ್ಷ ಶಿವಲಿಂಗ, ಕಿಶೋರ್, ಲೋಕೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ವಿಶ್ವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.