Kodagu

ನಾಪೋಕ್ಲು ಗೌರಿ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ

admincoorgdaily

ನಾಪೋಕ್ಲು ಗೌರಿ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ
ನಾಪೋಕ್ಲು, ಸೆ.16: ನಾಪೋಕ್ಲು ಪೊನ್ನು ಮುತ್ತಪ್ಪ ದೇವಸ್ಥಾನ ಸಮಿತಿ ಹಾಗೂ ಕಕ್ಕುಂದಕಾಡು ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ ಗೌರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಅಲಿ, ವಲಯ ಅಧ್ಯಕ್ಷ ಕುಶಾಲಪ್ಪ, ಪಕ್ಷದ ಮುಖಂಡರಾದ ಸಾಬ ತಿಮ್ಮಯ್ಯ, ಸೂರಜ್ ಹೊಸೂರು, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರ, ಆಡಳಿತ ಮಂಡಳಿ ಸದಸ್ಯರು, ಕಕ್ಕುಂದಕಾಡು ಗಣಪತಿ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಕುಂಡಚ್ಚಿರ ಮಂಜು ದೇವಯ್ಯ, ಯೂತ್ ಕಾಂಗ್ರೆಸ್ ನಿರೂಪ್, ಆಪ್ರು ರವೀಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.