Kodagu

ಶಿವಕೇರಿ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ - ಗಣ್ಯರಿಗೆ ಸನ್ಮಾನ

admincoorgdaily

ಶಿವಕೇರಿ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ - ಗಣ್ಯರಿಗೆ ಸನ್ಮಾನ
ವಿರಾಜಪೇಟೆ: ಶಿವಕೇರಿಯ ಶ್ರೀ ವಿನಾಯಕ ಯುವ ಸಮಿತಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿದ್ದರು.

ಈ ವೇಳೆ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಶಾಸಕರು ಹಾಗೂ ಇತರ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮಹಿಳಾ ಬ್ಲಾಕ್ ಅಧ್ಯಕ್ಷೆ ಕಾಳಮಾಂಡ ನೈನಾ ಜಗತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಸೀರ್, ತಾಲೂಕು ಕೆಡಿಪಿ ಸದಸ್ಯ ರಫೀಕ್, ಮಾಜಿ ಪುರಸಭೆ ಸದಸ್ಯ ರಾಫಿ, ಶಿವಕೇರಿ ವಿನಾಯಕ ಯುವ ಸಮಿತಿ ಅಧ್ಯಕ್ಷ ರಾಕೇಶ್ ಚುಮ್ಮ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಡಾ. ಸಿಂಪಿ, ಸಮಾಜ ಸೇವಕ ಸಂಜು ಸುಬ್ಬಯ್ಯ ಸೇರಿದಂತೆ ಸಚಿನ್, ಸಾಗರ್, ಕಾಳಮಾಂಡ ಜಗತ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.