Kodagu

ವಿನಾಯಕ ಸೇವಾ ಸಂಘದ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ

admincoorgdaily

ವಿನಾಯಕ ಸೇವಾ ಸಂಘದ ಗಣೇಶೋತ್ಸವದಲ್ಲಿ ಶಾಸಕ ಪೊನ್ನಣ್ಣ ಭಾಗಿ
ನಾಪೋಕ್ಲು; ವಿನಾಯಕ ಸೇವಾ ಸಂಘ ಹಾಗೂ ಗಜಾನನ ಸೇವಾ ಯುವಕರ ಸಂಘದವರು ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಅಲಿ, ವಲಯ ಅಧ್ಯಕ್ಷ ವೆಂಕಟೇಶ್ ಕೋಳಿಬೈಲು, ಚಿತ್ರ ನಟ ಪ್ರಕಾಶ್ ತುಮಿನಾಡು, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ವಕೀಲ ಸುನಿಲ್ ಪತ್ತ್ ರಾವ್, ಪ್ರಕಾಶ್ ಕುದುಪಜೆ, ಹರ್ಷ ದೇವಂಗೋಡಿ, ಕೇದಂಬಾಡಿ ರಮೇಶ್, ಹ್ಯಾರೀಶ್ ಚೆಟ್ಟಿಮನಿ, ಅಪ್ರು ರವೀಂದ್ರ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಯೂತ್ ಕಾಂಗ್ರೆಸ್ ಹಂಸ ಕೋಡಿ, ಗೌರೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.