ಕೆದಮುಳ್ಳೂರಿನಲ್ಲಿ 1 ಕೋಟಿ ವೆಚ್ಚದ ನೂತನ ಸೇತುವೆಗೆ ಶಾಸಕ ಪೊನ್ನಣ್ಣರಿಂದ ಭೂಮಿಪೂಜೆ
admincoorgdaily

ವಿರಾಜಪೇಟೆ:ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಭಾಗದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಚಾಲನೆ ನೀಡುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಕೆದಮುಳ್ಳೂರು ಭಾಗದ ಕುಂಞಮಕ್ಕಿ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗೆ ನೂತನ ಸೇತುವೆ ನಿರ್ಮಿಸಲು ₹1 ಕೋಟಿ ವೆಚ್ಚದ ವಿಶೇಷ ಅನುದಾನದಡಿ ಭೂಮಿಪೂಜೆಯನ್ನು ನೆರವೇರಿಸಿದರು.
ವಿರಾಜಪೇಟೆ-ಬೊಯಿಕೇರಿ-ಕೊಟ್ಟೋಳಿ-ಪಾಲಂಗಾಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಲೋಕೋಪಯೋಗಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದು, ಸುಗಮ ಹಾಗೂ ಸುರಕ್ಷಿತ ಸಂಚಾರದ ದೃಷ್ಟಿಯಿಂದ ಸೇತುವೆಯ ಅಗತ್ಯವನ್ನು ಮನಗಂಡ ಶಾಸಕರು, ಇಂದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಳಮಾಂಡ ನೈನಾ ಜಗತ್, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯ ಪ್ರಶಾಂತ್ ಉತ್ತಪ್ಪ, ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಪಂಚಾಯತ್ ಮಾಜಿ ಸದಸ್ಯ ಇಸ್ಮಾಯಿಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಉದಯ್ ಮಾದಪ್ಪ, ಪಕ್ಷದ ಮುಖಂಡರಾದ ಬೆಲ್ಲುಗೋಪಯ್ಯ, ಎಂ.ವೈ. ಆಲಿ, ವಿಜಯಕುಮಾರ್, ಜಿತನ್, ಧ್ಯಾನಿ, ಮಿಟ್ಟು ಅಯ್ಯಪ್ಪ, ಜಪ್ರಿ ಉತ್ತಪ್ಪ, ಜೀವನ್, ಮುದ್ದಯ್ಯ, ದೀಪಕ್, ಜಾಲು ಚಂಗಪ್ಪ, ಬಟ್ಟಕಾಳಂಡ ರಾಜ ದಿನೇಶ್, ಕಾಳಮಾಂಡ ಜಗತ್, ಸಹದೇವ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.