Kodagu

ಎಡಪಾಲ ಸರ್ಕಾರಿ ಶಾಲೆಯಲ್ಲಿ ₹20 ಲಕ್ಷ ವೆಚ್ಚದ ಕೊಠಡಿ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣರಿಂದ ಗುದ್ದಲಿ ಪೂಜೆ

admincoorgdaily

ಎಡಪಾಲ ಸರ್ಕಾರಿ ಶಾಲೆಯಲ್ಲಿ ₹20 ಲಕ್ಷ ವೆಚ್ಚದ ಕೊಠಡಿ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣರಿಂದ ಗುದ್ದಲಿ ಪೂಜೆ
ಮಡಿಕೇರಿ;ತಾಲೂಕಿನ ಎಡಪಾಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಭೇಟಿ ನೀಡಿ, ₹20 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಸೌಕತ್ ಆಲಿ, ವಲಯ ಅಧ್ಯಕ್ಷ ಕೊಡೀರ ವಿನೋದ್ ನಾಣಯ್ಯ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮುಖಂಡರಾದ ಪ್ರಕಾಶ್, ಎಡಪಾಲ ಶಾಫಿ, ಕುಂಡಚ್ಚೀರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಉದಯ್ ಮಾದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಹಂಸ ಕೋಡಿ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.