ತ್ರಿವೇಣಿ ಸಂಗಮದಲ್ಲಿ ಮಳೆಗಾಗಿ ಶಾಸಕ ಪೊನ್ನಣ್ಣ ಪ್ರಾರ್ಥನೆ
admincoorgdaily

ಭಾಗಮಂಡಲ: ಭಾಗಮಂಡಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ತ್ರಿವೇಣಿ ಸಂಗಮದಲ್ಲಿ ತಾಯಿ ಕಾವೇರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಾಡಿಗೆ ಅಗತ್ಯ ಪ್ರಮಾಣದಲ್ಲಿ ಮಳೆ ನೀಡುವಂತೆ ಕಾವೇರಿ ತಾಯಿಯಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ವೆಂಕಟೇಶ್ ಕೋಳಿಬೈಲು, ಪಕ್ಷದ ಮುಖಂಡರಾದ ಪ್ರಕಾಶ್ ಕುದುಪಜೆ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಸತೀಶ್, ಆಪ್ರು ರವೀಂದ್ರ, ಭವಿನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.