Kodagu

ಇಂಜಿಲಗೆರೆ ಗ್ರಾಮಕ್ಕೆ ಶಾಸಕ ಪೊನ್ನಣ್ಣ ಭೇಟಿ - 4.50 ಲಕ್ಷದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಭೂಮಿ ಪೂಜೆ

admincoorgdaily

ಇಂಜಿಲಗೆರೆ ಗ್ರಾಮಕ್ಕೆ ಶಾಸಕ ಪೊನ್ನಣ್ಣ ಭೇಟಿ - 4.50 ಲಕ್ಷದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಭೂಮಿ ಪೂಜೆ
ವಿರಾಜಪೇಟೆ:ತಾಲೂಕಿನ ಇಂಜಲಗೆರೆ ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಇಂದು ಭೇಟಿ ನೀಡಿದರು.

ಅಮ್ಮತ್ತಿ ಹೋಬಳಿಯ ಪುಲಿಯೇರಿ, ಇಂಜಲಗೆರೆ, ಕಲ್ಲುಕೋರೆ ಭಾಗಗಳಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹4.50 ಲಕ್ಷ ವೆಚ್ಚದಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಕೊಳವೆ ಬಾವಿ ಕಾಮಗಾರಿ ಆರಂಭಿಸಲು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದ ಜನರ ನೀರಿನ ಪೂರೈಕೆಯನ್ನು ನಿರ್ವಹಿಸಲು ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಭಾಗವಾಗಿ ಅಗತ್ಯವಿರುವ ಕಡೆ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲಾಗಿದೆ. ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದ ಪ್ರತಿಯೊಂದು ಯೋಜನೆ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬುದೇ ನನ್ನ ಆಶಯ ಎಂದರು. ಫಲಾನುಭವಿಗಳಿಗೆ ಪತ್ರ ಹಸ್ತಾಂತರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಶಾಸಕರು ಹಾಗೂ ಪ್ರಮುಖರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯಾಧ್ಯಕ್ಷ ರಾಜನ್, ಸಿದ್ದಾಪುರ ವಲಯಾಧ್ಯಕ್ಷ ಪ್ರತೀಶ್, ಯುವ ಕಾಂಗ್ರೆಸ್ ನೌಶಾದ್, ಮಸೀದಿ ಅಧ್ಯಕ್ಷ ಹಂಸ, ಮೊಹಮ್ಮದ್ ಆಲಿ, ಕಮಿಟಿ ಸದಸ್ಯರು, ವಿರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮುಖಂಡರಾದ ಚೆಕು, ಅನಿಲ್, ನೆಲ್ಲಮಕ್ಕಡ ರಶ್ಮಿ ಅಪ್ಪಯ್ಯ, ಶಬರೀಶ್ ಶೆಟ್ಟಿ, ಕುಂಡಚ್ಚಿರ ಮಂಜು ದೇವಯ್ಯ, ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ, ಉದಯ ಮಾದಪ್ಪ, ದಾನಿಗಳಾದ ಎಂ.ಆರ್. ಜೋಸೆಫ್, ರಾಧಾಕೃಷ್ಣನ್, ಜಿಮ್ಮಿ ಸಿಖ್ವೇರಾ, ದಾಸ್, ಸಲೀಮ್, ಉಮರ್, ಸಜಾನ್, ಅಯೂಬ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.