Kodagu

ಚೇಲಾವರ ಪೊನ್ನೋಲು ಶಾಸ್ತಾವು ದೇವಸ್ಥಾನಕ್ಕೆ ಶಾಸಕ ಪೊನ್ನಣ್ಣ ಭೇಟಿ: ರೂ. 5 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ

admincoorgdaily

ಚೇಲಾವರ ಪೊನ್ನೋಲು ಶಾಸ್ತಾವು ದೇವಸ್ಥಾನಕ್ಕೆ ಶಾಸಕ ಪೊನ್ನಣ್ಣ ಭೇಟಿ: ರೂ. 5 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ
ಮಡಿಕೇರಿ:ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಲಾವರ ಭಾಗದ ಪ್ರಸಿದ್ಧ ಪೊನ್ನೋಲು ಶಾಸ್ತಾವು ದೇವಸ್ಥಾನಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲದೆ, ತಮ್ಮ ಶಾಸಕರ ಅನುದಾನದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಡಿಯತ್ನಾಡ್ ಪೊನ್ನೋಲು ಶಾಸ್ತಾವು ಪುದಿಯೋಡಿ ದೇವಸ್ಥಾನದ ಆವರಣ ರಸ್ತೆಯನ್ನು ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಪಟ್ಟಚೇರುವಂಡ ಕುಟುಂಬಸ್ಥರು, ಮೀನಾ, ದೇವಯ್ಯ, ಭೀಮ್ಮಯ್ಯ, ದೀಪಕ್, ದಿಲೀಪ್, ಸಂಜು ಗಣಪತಿ, ಪವನ್, ಗಿರಿ, ಮಂಜು, ಚಿಟ್ಟು ಸೀತಾರಾಮ್, ರಮೇಶ್, ಸುಬ್ಬಯ್ಯ, ಕುಂಡಚ್ಚಿರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಸಜನ್ ನಂಜುಂಡ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.