Kodagu

ಶ್ರೀಮಂಗಲದ ಅಮ್ಮೆಕೊಲ್ಲಿ ಗಿರಿಜನ ಹಾಡಿಗೆ ಶಾಸಕ ಪೊನ್ನಣ್ಣ ಭೇಟಿ

admincoorgdaily

ಶ್ರೀಮಂಗಲದ ಅಮ್ಮೆಕೊಲ್ಲಿ ಗಿರಿಜನ ಹಾಡಿಗೆ ಶಾಸಕ ಪೊನ್ನಣ್ಣ ಭೇಟಿ
ಪೊನ್ನಂಪೇಟೆ:ಶ್ರೀಮಂಗಲ ಕುರ್ಚಿ ಗ್ರಾಮದ ಅಮ್ಮೆಕೊಲ್ಲಿ ಗಿರಿಜನ ಹಾಡಿಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಶ್ರೀಮಂಗಲದಲ್ಲಿ ನಡೆದ ಪ್ರಜಾಸೇವೆ ಅಭಿಯಾನದ ನಂತರ ಹಾಡಿಗೆ ಭೇಟಿ ನೀಡಿದ ಶಾಸಕರು, ಸ್ಥಳೀಯರೊಂದಿಗೆ ಆತ್ಮೀಯವಾಗಿ ಮಾತನಾಡಿ ಅವರ ಅಹವಾಲು ಸ್ವೀಕರಿಸಿದರು. ಹಾಡಿಯಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಂತೆ ಹಾಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ನಿವಾಸಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ಪಾಲ್ವಿನ್ ಪೂಣಚ್ಚ, ಪ್ರಭು, ರಾಮಕೃಷ್ಣ, ತಾಲೂಕು ಗ್ಯಾರಂಟಿ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಡಿಸಿಸಿ ಸದಸ್ಯರಾದ ವಿಶು, ಸಂದೀಪ್, ಮುಖಂಡರಾದ ತಿತೀರ ಮಂದಣ್ಣ, ಅಜ್ಜಿಕುಟ್ಟಿರ ಗಿರೀಶ್, ಕುಂಡಚ್ಚಿರ ಮಂಜು ದೇವಯ್ಯ ಸೇರಿದಂತೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.