ಆನೆಕಾಡಿನ ರಸ್ತೆ ಉಬ್ಬುಗಳ ಮಾದರಿ ಸೋಮೇಶ್ವರ ದೇವಸ್ಥಾನದ ಬಳಿ ಅತ್ಯವಶ್ಯಕ ; ಸಾರ್ವಜನಿಕರ ಬೇಡಿಕೆ
admincoorgdaily

ಕುಶಾಲನಗರ, ಅ.14 : ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಮುಂಭಾಗದ ಹೆದ್ದಾಯ ರಸ್ತೆ ವಿಭಜಕ ಪ್ರಾರಂಭವಾಗುವ ಸ್ಥಳದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 87 ಅಪಘಾತಗಳು ಸಂಭವಿಸಿದೆ. ಇದರಲ್ಲಿ ಕೆಲವೇ ಕೆಲವು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು.
ಸರಕಾರಿ ಆಸ್ಪತ್ರೆಯ ಹಿಂಭಾಗದ ರಸ್ತೆ, ಟೌನ್ ಪೊಲೀಸ್ ಠಾಣೆ ಎದುರಿನ ರಸ್ತೆ ಹಾಗೂ ಸೋಮೇಶ್ವರ ದೇವಸ್ಥಾನದ ಪಕ್ಕದ ರಸ್ತೆ, ಬಸಪ್ಪ ಬಡಾವಣೆಗೆ ತೆರಳುವ ರಸ್ತೆ , ಕೂಡಿಗೆ ಕಡೆಯಿಂದ ಬರುವ ಹೀಗೆ ಎಲ್ಲ ರಸ್ತೆಗಳೂ ಕೂಡುವ ಈ ಜಾಗ ಅತ್ಯಂತ ಅಪಾಯಕಾರಿ ಅಪಘಾತ ವಲಯವಾಗಿದೆ. ಈ ಹಿಂದೆ ಸಾರ್ವಜನಿಕರು ಈ ಬಗ್ಗೆ ಕೆಲವು ಬಾರಿ ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನಪಟ್ಟರೂ ಸಫಲರಾಗಲಿಲ್ಲ. ಇತ್ತೀಚೆಗೆ ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅನತಿ ದೂರದಲ್ಲಿ ಚೌಕಿಯೊಂದನ್ನು ನಿರ್ಮಿಸಿ ಕರ್ತವ್ಯ ನಿರತರಾಗಿರುವುದು ಸ್ವಾಗತಾರ್ಹ.
ಮೇಲ್ಕಂಡ ಸಾರ್ವಜನಿಕರ ಬೇಡಿಕೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ಚಿಂತಿಸುವಷ್ಟು ಆರ್ಥಿಕ ಹೊರೆಯುಂಟಾಗುವುದಿಲ್ಲ. ರಸ್ತೆಯುಬ್ಬು ಹಾಕುವುದರಿಂದ ಪ್ರತಿದಿನ ಸಂಭವಿಸುತ್ತಿರುವ ಅಪಘಾತಗಳನ್ನು ಶೇಕಡಾ 99ರಷ್ಟು ಭಾಗ ತಡೆಗಟ್ಟಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ವರದಿ: ಶ್ರೀಧರ್ ನಾರಾಯಣ್